ದಾವಣಗೆರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರ್ಪಡೆ ಕುರಿತು ಹೇಳಿಕೆ ನೀಡಿದ್ದು. ‘ಬಿಜೆಪಿಯವರು ಕರೆಯದೆ ಅವರಪ್ಪನಾಣೆಗೂ ನಾನು ಬಿಜೆಪಿಗೆ ಹೋಗಲ್ಲ. ಕಳ್ಳ ಅಪ್ಪ-ಮಗನನ್ನು ಬಿಜೆಪಿಯಿಂದ ದೂರವಿಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ದಾವಣಗೆರೆಯ ದೇವರ ಬೆಳಕೆರೆ ಗ್ರಾಮದಲ್ಲಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್ “ದೇವರ ಬೆಳಕೆರೆ ಗ್ರಾಮದ ಬಸವೇಶ್ವರ ಜಯಂತಿಯಲ್ಲಿ ನಾಲ್ಕು ಸಾವಿರ ಜನ ಸೇರಿದ್ದು ಖುಷಿ ವಿಚಾರ. ಇಂದು ಕೆಲವು ಸ್ವಾಮೀಜಿಗಳು ಬಸವಣ್ಣನನ್ನ ಕಾಂಟ್ರಕ್ಟ್ ತೆಗೆದುಕೊಂಡಿದ್ದಾರೆ, ಆದರೆ ಭಾರತ ಉಳಿಬೇಕು ಅಂದ್ರೆ ಸನಾತನ ಧರ್ಮ ಉಳಿಬೇಕು. ಕಾಂಗ್ರೆಸ್ ಎರಡು ಭಾರಿ ಅಂಬೆಡ್ಕರ್ ಅವರನ್ನ ಸೋಲಿಸಿದೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರನ್ನು ದೂರವಿಡಬೇಕು. ದಲಿತರನ್ನ ಹತ್ತಿರ ಇಟ್ಟು ನಾವೆಲ್ಲಾ ಒಂದು ಎಂದು ಬಾಳಬೇಕು ಎಂದು ಯತ್ನಾಳ್ ಹೇಳಿದರು. ಇದನ್ನೂ ಓದಿ :ಕದನ ವಿರಾಮದ ನಡುವೆ ಐಪಿಎಲ್ ಪುನರಾರಂಭ: ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್
ಕರೆಯದೆ ನಾನು ಬಿಜೆಪಿಗೆ ಹೋಗಲ್ಲ..!
ಬಿಜೆಪಿ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ಯತ್ನಾಳ್ ” ಬಿಜೆಪಿ ಅವರೇ ಕರೆಯದೇ ಅವರಪ್ಪನಾಣೆ ನಾನು ಬಿಜೆಪಿಗೆ ಹೋಗಲ್ಲ. ಈ ಕಳ್ಳ-ಅಪ್ಪ ಮಕ್ಕಳನ್ನು ದೂರವಿಡುವುದೇ ನಮ್ಮ ಉದ್ದೇಶ. ಅಪ್ಪ, ಮಕ್ಕಳನ್ನ ಜೈಲಿಗೆ ಕಳುಹಿಸದೆ ಬಿಡೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ :ಮುಂಬೈ ವಿಮಾನ ನಿಲ್ದಾಣದಲ್ಲಿ ಐಸಿಸ್ ಉಗ್ರರನ್ನು ಬಂಧಿಸಿದ NIA
ಮುಂದುವರಿದು ಮಾತನಾಡಿದ ಯತ್ನಾಳ್ “ಕರ್ನಾಟಕದಲ್ಲಿ ಒಂದು ಹೊಸ ಕರ್ನಾಟಕ ರಚನೆ ಮಾಡೋ ಸಂಭವ ಇದೆ. ರಾಜ್ಯದಲ್ಲಿ ನಾಲ್ಕು ವರ್ಷದಿಂದ ಪೊಲೀಸ್ ಹುದ್ದೆಗೆ ಪರೀಕ್ಷೆ ಕರೆದಿಲ್ಲ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಮೋಸ ನಡೆಯುತ್ತಿದೆ. 2028ರ ಒಳಗೆ ಮತ್ತೆ ನಮ್ಮದೇ ಬಿಜೆಪಿ ಸರ್ಕಾರ ಬರುತ್ತೆ ಎಂದು ಯತ್ನಾಳ್ ಹೇಳಿದರು.