Saturday, May 17, 2025

ವಿಶ್ವಗುರುವನ್ನ ದೇಶ ದ್ರೋಹಿ ಎಂದು ಜೈಲಿಗೆ ಹಾಕಬೇಕು: ಎಂ. ಲಕ್ಷ್ಮಣ್​​

ನೊಮೈಸೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮಕ್ಕೆ ಕಾಂಗ್ರೆಸ್​ ವಕ್ತಾರ ಎಂ. ಲಕ್ಷ್ಮಣ್​ ಆಕ್ಷೇಪ ವ್ಯಕ್ತಪಡಿಸಿದ್ದು. ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಒಳ್ಳೇ ಅವಕಾಶ ಸಿಕ್ಕಿತ್ತು. ಆದರೆ ಮೋದಿ ಟ್ರಂಪ್​ ಮಾತು ಕೇಳಿ ಅದನ್ನು ಕೈ ಚೆಲ್ಲಿದ್ದಾರೆ. ಮೊದಲು ವಿಶ್ವ ಗುರುವನ್ನು ದೇಶದ್ರೋಹಿ ಎಂದು ಜೈಲಿಗೆ ಹಾಕಬೇಕು ಎಂದು ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್​ “ಆರ್ಮಿ ಕಮಾಂಡರ್​ ಸೋಫಿಯ ಖುರೇಶಿ ಕುರಿತು ಮಧ್ಯಪ್ರದೇಶದ ಬಿಜೆಪಿ ನಾಯಕ ವಿಜಯ್ ಶಾ ಧರ್ಮಾಧಾರಿತವಾಗಿ ಮಾತನಾಡಿದ್ದಾರೆ. ಸೇನೆಯಲ್ಲಿ ಜಾತಿ, ಧರ್ಮ ಎಂಬುದಿಲ್ಲ. ಸೋಫಿಯ ಖುರೇಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರನ್ನು ಟೆರರಿಸ್ಟ್​ ತಂಗಿ ಎಂದು ಕರೆದಿದ್ದಾರೆ. ಇಂತಹ ಹೇಳಕೆಯನ್ನ ಇಲ್ಲಿಯವರೆಗೆ ಯಾರು ಖಂಡನೆ ಮಾಡಿಲ್ಲ. ಅವರು ಮುಸ್ಲಿಂ ಅನ್ನೋ ಕಾರಣಕ್ಕೆ ಅಳತೆ ಮಾಡುತ್ತಿದ್ದಾರೆ. ಒಂದು ವೇಳೆ ವಿರೋಧ ಪಕ್ಷ ಇಂತಹ ಹೇಳಿಕೆ ನೀಡಿದ್ದರೆ ಬೆಂಕಿ ಹೊತ್ತಿಸಿ ಬಿಡುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ :ತಿರುಪತಿಗೆ ಭೇಟಿ ಕೊಟ್ಟ ಇಸ್ರೋ ಅಧ್ಯಕ್ಷ ವಿ. ನಾರಾಯಣ

ಕದನ ವಿರಾಮದ ಬಗ್ಗೆ ಎಂ. ಲಕ್ಷ್ಮಣ್​ ಮಾತು..!

ಕದನ ವಿರಾಮ ಘೋಷಣೆ ವಿಚಾರದ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆಕ್ಷೇಪ “ಪಾಕ್ ಆಕ್ರಮಿತ ಪ್ರದೇಶ ವಶಪಡಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಪ್ರಧಾನಿ ಟ್ರಂಪ್​ ಮಾತು ಕೇಳಿ ಕೈಚಲ್ಲಿ ಕೂತಿದ್ದಾರೆ. ಇದು ಕೇವಲ ಇಬ್ಬರಿಗೋಸ್ಕರ ಕದನ ವಿರಾಮ ಘೋಷಣೆ ಮಾಡಿರೋದು. ಅವರು ಯಾರು ಅಂದರೆ ಅದಾನಿ,ಅಂಬಾನಿ ಇವರಿಬ್ಬ ವ್ಯಾಪಾರಕ್ಕೆ ಹೊಡೆತ ಬೀಳುತ್ತೆ ಎನ್ನುವ ಉದ್ದೇಶಕ್ಕಾಗಿ ಕದನ ವಿರಾಮಕ್ಕೆ ಒಪ್ಪಿಗೆ ಘೋಷಿಸಿದ್ದಾರೆ. ಇದನ್ನೂ ಓದಿ:‘ದೇಶದ ಯೋಧರು ಮೋದಿ ಕಾಲಿಗೆ ನಮಸ್ಕರಿಸುತ್ತಾರೆ’: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಚಿವ

ಭಾರತಕ್ಕೆ ಪಾಕಿಸ್ತಾನವನ್ನ ಚಿಂದಿ ಉಡಾಯಿಸುವಂತಹ ಅವಕಾಶ ಸಿಕ್ಕಿತ್ತು. ಆದರೆ ಪ್ರಧಾನಿ ಇದನ್ನ ಕೈಚೆಲ್ಲಿ ದೇಶದ ಸೈನಿಕರಿಗ ಅಪಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಅಡ್ಜೆಸ್ಟ್ಮೆಂಟ್​ ರಾಜಕೀಯ ಮಾಡಿದ್ದಾರೆ. ನಮ್ಮ ದೇಶದಲ್ಲಿ ಬಿಜೆಪಿ ಎಂದರೆ ಹಿಂದು-ಮುಸ್ಲಿಂ ಕೋಮು ಭಾವನೆ ತಂದು ಪಕ್ಷವನ್ನ ಅಧಿಕಾರಕ್ಕೆ ತರುತ್ತಾರೆ. ಇದನೆಲ್ಲಾ ನಾವು ಮಾತನಾಡಿದರೆ ನಾವು ದೇಶದ್ರೋಹಿಗಳು ಅಂತಾರೆ. ಮೊದಲು ವಿಶ್ವಗುರುವನ್ನ ದೇಶದ್ರೋಹಿ ಅಂತ ಜೈಲಿಗೆ ಹಾಕಬೇಕು ಎಂದು ಕಾಂಗ್ರೆಸ್​ ವಕ್ತಾರ ಎಂ ಲಕ್ಷ್ಮಣ್ ಅವರಯ ಕೇಂದ್ರ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES