ವಿಜಯಪುರ: ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಚರಣೆ ನಡೆಸಿತ್ತು. ಈ ಕಾರ್ಯಚರಣೆಯಲ್ಲಿ ಪಾಕ್ನಲ್ಲಿದ್ದ ಉಗ್ರ ನೆಲೆಗಳನ್ನು ಹೊಡೆದು ಉರುಳಿಸಿದ್ದ ಸೇನೆ. 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಆದರೆ ಈಗ ರೈತರ ತಾವೂ ಬೆಳೆದ ಬೆಳೆಯನ್ನ ಪಾಕ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಕಳುಹಿಸದಿರಲು ನಿರ್ಧರಿಸಿವೆ.
ಹೌದು..ಒಂದು ಕಡೆ ದೇಶದಲ್ಲಿ ಸೈನಿಕರು ಪಾಪಿ ಪಾಕಿಸ್ತಾನವನ್ನು ಹೆಕ್ಕಿ ಹೆಕ್ಕಿ ಹೊಡೆಯುತ್ತಿದ್ದರೆ, ಇತ್ತ ರೈತರು ಕೂಡ ದೇಶಾಭಿಮಾನ ಮೆರೆಯುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಟವಾದ ಹಣ್ಣುಗಳು ಪಾಕಿಸ್ತಾನ, ಟರ್ಕಿ ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತಿತ್ತು. ನಂಬಿಕೆ ದ್ರೋಹಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇನ್ನೊಂದು ಕಡೆ ಪಾಕಿಸ್ತಾನಕ್ಕೆ ಟರ್ಕಿ ಮಿಸೈಲ್ ಪೂರೈಸಿದೆ. ಇದರಿಂದ ರೊಚ್ಚಿಗೆದ್ದ ರೈತರು ಬಾಯ್ಕಾಟ್ ಅಭಿಯಾನ ಮಾಡುತ್ತಿದ್ದಾರೆ. ಇದನ್ನೂ ಓದಿ :ವಿಶ್ವ ರಕ್ತದೊತ್ತಡ ದಿನ: ಆರೋಗ್ಯ ಕಾಪಾಡಲು ರಾಜೀವ್‌ಗಾಂಧಿ ವಿವಿಯಿಂದ ಜಾಗೃತಿ ಕಾರ್ಯಕ್ರಮ
ವಿಜಯಪುರ ಜಿಲ್ಲೆಯ ರೈತರು ಬೆಳೆಯುವ ಉತ್ಕೃಷ್ಟವಾದ ವಿವಿಧ ತಳಿಯ ಮಾವು, ದಾಳಿಂಬೆ, ಟಮೊಟೋ, ಸೇರದಂತೆ ಇತರ ಹಣ್ಣುಗಳನ್ನು ಪಾಕಿಸ್ತಾನ, ಟರ್ಕಿ, ಚೈನಾ ಸೇರಿದಂತೆ ವಿಶ್ವದ ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಈಗ ರೈತರು ಪಾಕಿಸ್ತಾನ್, ಟರ್ಕಿ, ಚೈನಾ ದೇಶಕ್ಕೆ ತಮ್ಮ ಹಣ್ಣುಗಳನ್ನು ರೈತ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಕಳಿಸುವುದಿಲ್ಲ ಎಂದು ದೇಶಾಭಿಮಾನ ಮೆರೆಯುತ್ತಿದ್ದಾರೆ.
ಪಾಕಿಸ್ತಾನ ಯಾವತ್ತೂ ಕೂಡ ವಿಶ್ವಾಸಕ್ಕೆ ಅರ್ಹವಲ್ಲದ ದೇಶ. ವಿಜಯಪುರ ಜಿಲ್ಲೆಯ ರೈತರು ಯಾವತ್ತಿಗೂ ಕೂಡ ದೇಶದ ಪರ, ಸೈನಿಕರ ಪರ ಇದ್ದೇವೆ. ದಲ್ಲಾಳಿಗಳು ಕೂಡ ಪಾಕಿಸ್ತಾನ, ಟರ್ಕಿ, ಚೀನಾ, ದೇಶಕ್ಕೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಒಂದು ವೇಳೆ ಮಾರಾಟ ಮಾಡಿದರೆ ನಾವು ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ :ಪಾಕ್ಗೆ IMF ನೀಡುವ ಹಣಕಾಸು ನೆರವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತಿದೆ: ರಾಜನಾಥ್ ಸಿಂಗ್
ಪಾಪಿ ಪಾಕಿಸ್ತಾನ ಹಾಗೂ ಅದರ ಬೆಂಬಲಿತ ದೇಶಗಳಿಗೆ ನಮ್ಮ ರೈತ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಿಂತ ನಮ್ಮ ದೇಶ ಕಾಯುವ ಸೈನಿಕರಿಗೆ ಹಾಗೂ ಸೈನಿಕರ ಕುಟುಂಬಕ್ಕೆ ನಾವು ಬೆಳೆದ ಹಣ್ಣುಗಳನ್ನು ನೀಡುತ್ತೇವೆ ಎಂದು ರೈತರು ಹೇಳಿದ್ದಾರೆ. ದೇಶಕ್ಕಾಗಿ ರೈತರು ಯಾವುದೇ ತ್ಯಾಗಕ್ಕೂ ಸಿದ್ಧ ನಮಗೆ ದೇಶ ಮೊದಲು. ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ರೈತರು ಕೂಡ ತಕ್ಕ ಶಾಸ್ತಿ ನೀಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬೆಳೆದ ಹಣ್ಣುಗಳನ್ನು ಇಲ್ಲಿಯೇ ಮಾರಾಟ ಮಾಡಲು ಹಾಗೂ ಸೈನಿಕ ಹಾಗೂ ಸೈನಿಕ ಕುಟುಂಬದವರಿಗೆ ನೀಡಲು ರೈತರು ನಿರ್ಧರಿಸಿದ್ದಾರೆ. ಪಾಕ್ ಉಗ್ರರ ವಿರುದ್ಧ ಆಫರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ನಮ್ಮ ಶತ್ರು ದೇಶ ಪಾಕಿಸ್ಥಾನಕ್ಕೆ ಟರ್ಕಿ ಮಿಸೈಲ್ ಗಳನ್ನು ಪೂರೈಕೆ ಮಾಡಿದೆ. ದೇಶದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.