ಮಂಗಳೂರು : ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಪಕ್ಷಗಳು ಮುಗಿ ಬೀಳುತ್ತಿದ್ದು. ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡುರಾವ್ “ಮೋದಿ ಹೇಳಿದ್ದೆಲ್ಲಾ ವೇದವಾಕ್ಯವಲ್ಲ, ಮೋದಿ ಇಡೀ ದೇಶದಲ್ಲೇ ಅತಿದೊಡ್ಡ ಸುಳ್ಳುಗಾರ ಎಂದು ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದಿನೇಶ್ ಗುಂಡುರಾವ್ “ಕಾಂಗ್ರೆಸ್ನವರು ಸೈನ್ಯವನ್ನ ಟೀಕೆ ಮಾಡುತ್ತಿಲ್ಲ. ಬಿಜೆಪಿಯ ಮಂತ್ರಿ , ಕರ್ನಲ್ ಸೋಫಿಯ ಖುರೇಷಿ ಬಗ್ಗೆ ಮಾತನಾಡಿದ್ದನ್ನ ನೋಡಿ, ಆತನ ವಿರುದ್ದ ಎಫ್ಐಆರ್ ಆಗೋ ಸನ್ನಿವೇಶ ಬಂದಿದೆ. ಪೆಹಾಲ್ಗಮ್ನಲ್ಲಿ ಗಂಡಂದಿರನ್ನ ಕಳೆದುಕೊಂಡವರೇ ಇದನ್ನ ಹಿಂದೂ ಮುಸ್ಲಿಂ ಮಾಡಬೇಡಿ ಎಂದಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗೆ ಕೇವಲ ಈ ಪ್ರಕರಣವನ್ನ ಹಿಂದೂ ಮುಸ್ಲಿಂ ಮಾಡಬೇಕು ಅಂತಿದ್ದಾರೆ. ಇದನ್ನೂ ಓದಿ :‘ಮುಸ್ಸಂಜೆ ಮಾತಿನ’ ಬಗ್ಗೆ ಕಿಚ್ಚನ ಮಾತು: ತಾಯಿಯನ್ನ ನೆನೆದು ಸುದೀಪ್ ಮಾತು
‘ಕದನ ವಿರಾಮ ಘೋಷಣೆ ಮಾಡಿದ ಪ್ರಧಾನಿಯನ್ನ ಟ್ರೋಲ್ ಮಾಡಬೇಕಿತ್ತು, ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಕದನ ವಿರಾಮ ಘೋಷಣೆ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ಪಷ್ಟವಾದ ವಿಚಾರವನ್ನ ರಾಜಕೀಯ ಮಾಡದೆ ಹೇಳಬೇಕು. ಪಾಕಿಸ್ತಾನದವರು ನಮ್ಮ 5 ಜೆಟ್ಗಳನ್ನ ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡೋದಕ್ಕೆ ಮೋದಿ ತಯಾರಿಲ್ಲ. ಪೆಹಾಲ್ಗಮ್ ನಲ್ಲಿ ನರಮೇಧ ಮಾಡಿದವರನ್ನ ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದು ಹೇಳಿದ್ದರು. ನಾವೆಲ್ಲಾ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಆದರ ಟ್ರಂಪ್ ಬಂದು ಕದನ ವಿರಾಮ ಘೋಷಿಸಿದರು’. ಇದನ್ನೂ ಓದಿ :ಕ್ರಿಕೆಟ್ ಆಡಬೇಡ ಎಂದು ಹೇಳಿದ ಶಿಕ್ಷಕನಿಗೆ ಬಿಯರ್ ಬಾಟಲ್ನಿಂದ ಇರಿದ ಯುವಕ
ಟ್ರಂಪ್ 20 ಸಲ ಮೀಡಿಯಾ ಮುಂದೆ ಬರುತ್ತಾರೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಆದರೆ ನಮ್ಮ ಪ್ರಧಾನಿಗಳಿಗೆ ಯಾರು ಪ್ರಶ್ನೆಗಳನ್ನ ಕೇಳೋಕೆ ಆಗೋದಿಲ್ಲ. ಅವರಿಗೆ ಪತ್ರಕರ್ತರು ಎಂದರೆ ಕ್ಯಾರೆ ಇಲ್ಲ, ಮಿಡಿಯಾ ಬಗ್ಗೆ ಮೋದಿ ಕ್ಯಾರೆ ಎನ್ನಲ್ಲ. ಮೋದಿ ಸರ್ವ ಪಕ್ಷದ ಸಭೆ ಕರೆದು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೋದಿ ಹೇಳಿದೆಲ್ಲಾ ವೇದ ವಾಕ್ಯ ಎಂದು ನಾವು ನಂಬಬೇಕಾ..? ಇಡಿ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕಥೆ ಹೇಳೋದರಲ್ಲಿ ಮೋದಿ ನಿಸ್ಸೀಮ. ನಮಗೆ ನಂಬಿಕೆ ಬರೋ ತರ ಅಧಿವೇಶನ ಕರೆದು ಉತ್ತರ ಕೊಡಲಿ ಎಂದು ದಿನೇಶ್ ಗುಂಡುರಾವ ಹೇಳಿದರು.