Wednesday, May 14, 2025

ಉಗ್ರ ಮಸೂದ್ ಕುಟುಂಬಕ್ಕೆ ಪಾಕ್​ ಸರ್ಕಾರದಿಂದ 14 ಕೋಟಿ ಪರಿಹಾರ ಘೋಷಣೆ

ಇಸ್ಲಾಮಾಬಾದ್: ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಜಗತ್ತಿನೆದುರು ಬಯಲಾಗಿದ್ದು. ಆಪರೇಷನ್​ ಸಿಂಧೂರ್ ಕಾರ್ಯಚರಣೆಯಲ್ಲಿ ಸಾವನ್ನಪ್ಪಿದ್ದ ಉಗ್ರ ಮಸೂದ್​ ಹಜರ್​ನ 14 ಜನ ಕುಟುಂಬ ಸದಸ್ಯರಿಗೆ ಪಾಕಿಸ್ತಾನ ಸರ್ಕಾರ 14 ಕೋಟಿ ಪರಿಹಾರವನ್ನ ಘೋಷಿಸಿದೆ.

ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಹಲ್ಪುರದಲ್ಲಿರುವ ಉಗ್ರನೆಲೆಯಲ್ಲಿ ವಾಸವಾಗಿದ್ದ ಮಸೂದ್​ ಅಜರ್​ನ 14 ಮಂದಿ ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು ಈ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನೂ ಓದಿ :ಕೊಟ್ಟ ಸಾಲ ವಾಪಸ್​ ಕೇಳದಕ್ಕೆ ಅಳಿಯನನ್ನೇ ಕೊ*ಲೆ ಮಾಡಿದ ಮಾವ

ಬಹಾವಲ್ಪುರದ ಸುಭಾನ್ ಅಲ್ಲಾ ಮಸೀದಿ ಮೇಲಿನ ದಾಳಿಯಲ್ಲಿ ಬಲಿಯಾದವರ ಪೈಕಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ. ಇದರ ಜೊತೆಗೆ ಮಸೂದ್‌ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಜರ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಇದೀಗ ಇವರ ಸಾವಿಗೆ ಪರಿಹಾರವಾಗಿ ಪಾಕ್​ ಸರ್ಕಾರ ತಲಾ 1 ಕೋಟಿ ಘೋಷಿಸಿದೆ. ಇದನ್ನೂ ಓದಿ :ಕೆನಡಾ ವಿದೇಶಾಂಗ ಮಂತ್ರಿಯಾಗಿ ಭಾರತ ಮೂಲದ ಮಹಿಳೆ ಆಯ್ಕೆ: ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ

ಅಜರ್ ಹಿನ್ನೆಲೆ ಏನು?

ನಿಷೇಧಿತ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮಾ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌ನಲ್ಲಿರುವ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ 2019ರ ಮೇ 1ರಂದು ವಿಶ್ವಸಂಸ್ಥೆ ಅಜರ್‌ನನ್ನ ಜಾಗತಿಕ ಉಗ್ರ ಎಂದು ಘೋಷಿಸಿತ್ತು.

RELATED ARTICLES

Related Articles

TRENDING ARTICLES