Wednesday, May 14, 2025

ಕೆನಡಾ ವಿದೇಶಾಂಗ ಮಂತ್ರಿಯಾಗಿ ಭಾರತ ಮೂಲದ ಮಹಿಳೆ ಆಯ್ಕೆ: ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ

ಕೆನಡಾದ ಹೊಸ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡ ಭಾರತೀಯ ಮೂಲದ ಕೆನಡಾದ ರಾಜಕಾರಣಿ ಅನಿತಾ ಆನಂದ್ ಅವರು ಭಗವದ್ಗೀತೆ ಮೇಲೆ ಕೈಇಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿದ್ದು. ಕೆನಡಾದಲ್ಲಿ ಖಲಿಸ್ತಾನಿಗಳಿಂದ ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ಕೆನಡಾದ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿರುವ ಮಾರ್ಕ್ ಕಾರ್ನಿ ಅವರು ಟ್ರುಡೋ ಸಮಯದಲ್ಲಿದ್ದ ಸಚಿವ ಸಂಪುಟವನ್ನು ಪುನರ್​ ರಚನೆ ಮಾಡುತ್ತಿದ್ದು. ಅದರ ಭಾಗವಾಗಿ ಅನಿತಾ ಆನಂದ್​ ಅವರನ್ನು ವಿದೇಶಾಂಗ ಸಚಿವರಾಗಿ ಆಯ್ಕೆ ಮಾಡಲಾಗಿದೆ. ಈ ಹುದ್ದೆ ಕೆನಡಾದ ಫೆಡರಲ್​ ಹುದ್ದೆಗಳಲ್ಲಿ ಅತ್ಯಂತ ಶಕ್ತಿಶಾಲಿ ಹುದ್ದೆ ಎಂದು ಪರಿಗಣಿಸಲಾಗಿದೆ. ಅಮೆರಿಕಾ ಜೊತೆಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹೆಚ್ಚು ಪ್ರಕ್ಷುಬ್ಧ ಜಾಗತಿಕ ಕ್ರಮದ ಸಮಯದಲ್ಲಿ ರಾಜತಾಂತ್ರಿಕತೆಯನ್ನು ಮುನ್ನಡೆಸುವ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ :‘ಮರಾಠಿ ಮಾತನಾಡದಿದ್ದರೆ ಪಿಜ್ಜಾಗೆ ಹಣ ಕೊಡಲ್ಲ’: ದಂಪತಿ ಕಿರಿಕ್​ ವಿಡಿಯೋ ವೈರಲ್​

ಅನಿತಾ ಆನಂದ್​ ಅವರ ಕುರಿತು..!

ಅನಿತ್​ ಆನಂದ್​ ಅವರ ತಂದೆ-ತಾಯಿ ಭಾರತದ ಮೂಲದವರಾಗಿದ್ದು. ಅವರ ತಾಯಿ ಪಂಜಾಬ್ ಮೂಲದವರು ಮತ್ತು ಅವರ ತಂದೆ ತಮಿಳುನಾಡು ಮೂಲದವರು. 1967 ರಲ್ಲಿ ನೋವಾ ಸ್ಕಾಟಿಯಾದ ಕೆಂಟ್ವಿಲ್ಲೆಯಲ್ಲಿ ಜನಿಸಿದ ಅನಿತ್​ ಆನಂದ್ ಅಲ್ಲಿಯೇ ಕೆನಡಾದಲ್ಲೇ ಬೆಳೆದರು. ಹಿಂದೂ ತತ್ವ ಶಾಸ್ತ್ರದ ಬಗ್ಗೆ ನಂಬಿಕೆ ಇಟ್ಟಿರುವ ಅವರು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕ ಮೌಲ್ಯಗಳನ್ನ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ :ವಿದೇಶಾಂಗ ಸಚಿವ ಜೈ ಶಂಕರ್​ಗೆ ನೀಡಿದ್ದ ಭದ್ರತೆಯಲ್ಲಿ ದಿಢೀರ್​ ಹೆಚ್ಚಳ..!

ಅನಿತಾ ಆನಂದ್ ಮೊದಲ ಬಾರಿಗೆ 2019 ರಲ್ಲಿ ಸಂಸತ್ತನ್ನು ಪ್ರವೇಶಿಸಿದರು, ಲಿಬರಲ್ ಪಕ್ಷದಿಂದ ಓಕ್ವಿಲ್ಲೆಯಿಂದ ಆಯ್ಕೆಯಾದ ಇವರು. COVID-19 ಸಾಂಕ್ರಾಮಿಕದ ಸಮಯದಲ್ಲಿ ಕೆನಡಾದ ಲಸಿಕೆ ಖರೀದಿ ಕಾರ್ಯತಂತ್ರವನ್ನು ಮೇಲ್ವಿಚಾರಣೆ ಮಾಡಿದ ಇವರು ಈ ಸಮಯದಲ್ಲಿ ಜನರಿಂದ ಹೆಚ್ಚು ಜನಪ್ರಿಯತೆ ಗಳಿಸಿದರು.  ನಂತರ, ರಕ್ಷಣಾ ಸಚಿವರಾಗಿ, ಮಿಲಿಟರಿ ಸುಧಾರಣೆಗಳು ಸೇರಿದಂತೆ ಹಲವು ಬಿಕ್ಕಟ್ಟುಗಳ ಸಮಯದಲ್ಲಿ ಇವರು ದೇಶವನ್ನ ಮುನ್ನಡೆಸಿದ್ದಾರೆ.

RELATED ARTICLES

Related Articles

TRENDING ARTICLES