Wednesday, May 14, 2025

ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ಬಾಲಕಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.95.6 ಅಂಕ

ಚಂಡೀಗಡ : ಆ್ಯಸಿಡ್​ ದಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದ ವಿದ್ಯಾರ್ಥಿನಿಯೊಬ್ಬಳು 12ನೇ ತರಗತಿ ಪರೀಕ್ಷೆಯಲ್ಲಿ ಶಾಲೆಗೆ ಫಸ್ಟ್​ ರ‍್ಯಾಂಕ್ ಪಡೆದಿದ್ದು. ಸಿಬಿಎಸ್​ಸಿ ಪರೀಕ್ಷೆಯಲ್ಲಿ 96.6% ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಈ ಬಾರಿ ಶೇ. 88.39 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮಧ್ಯೆ ಚಂಡೀಗಢದ ವಿದ್ಯಾರ್ಥಿನಿ ಕಾಫಿ ಎಂಬಾಕೆ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ತನ್ನ ಮೂರನೇ ವಯಸ್ಸಿನಲ್ಲೇ ಆ್ಯಸಿಡ್​ ದಾಳಿಗೆ ಒಳಗಾಗಿ ತನ್ನ ಕಣ್ಣು ಕಳೆದುಕೊಂಡಿದ್ದ ಬಾಲಕಿ 12 ನೇ ತರಗತಿ ಪರೀಕ್ಷೆಯಲ್ಲಿ 95.6% ಅಂಕ ಪಡೆದಿದ್ದಾರೆ.ಇದನ್ನು ಓದಿ :ಉಗ್ರ ಮಸೂದ್ ಕುಟುಂಬಕ್ಕೆ ಪಾಕ್​ ಸರ್ಕಾರದಿಂದ 14 ಕೋಟಿ ಪರಿಹಾರ ಘೋಷಣೆ

ವರದಿಗಳ ಪ್ರಕಾರ, ತನ್ನ ಮೂರನೇ ವಯಸ್ಸಿನಲ್ಲಿ ನೆರೆಮನೆಯಿಂದಲೇ ಆಸಿಡ್ ದಾಳಿಗೆ ಒಳಗಾಗಿದ್ದ ಕಾಫಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಳು. ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಈಕೆ 2016 ರಲ್ಲಿ ಎಂಟನೇ ವಯಸ್ಸಿನಲ್ಲಿ ಶಾಲೆಗೆ ಸೇರಿದಳು. ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಈಕೆಯನ್ನು 2018 ರಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್‌ನಲ್ಲಿ ನೇರವಾಗಿ 6 ​​ನೇ ತರಗತಿಗೆ ಸೇರಿಸಲಾಯಿತು. ಇದನ್ನೂ ಓದಿ:ಕೊಟ್ಟ ಸಾಲ ವಾಪಸ್​ ಕೇಳದಕ್ಕೆ ಅಳಿಯನನ್ನೇ ಕೊ*ಲೆ ಮಾಡಿದ ಮಾವ

ತನ್ನ 12 ನೇ ತರಗತಿಯ ಪರೀಕ್ಷೆಗಳಿಗೆ, ಕಾಫಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡರಿಂದ ಮೂರು ಗಂಟೆಗಳ ಕಾಲ ಆಡಿಯೋ ಪುಸ್ತಕಗಳು ಮತ್ತು ಯೂಟ್ಯೂಬ್ ಅನ್ನು ಅವಲಂಬಿಸಿ ಅಧ್ಯಯನ ಮಾಡುತ್ತಿದ್ದಳು. ಪರೀಕ್ಷೆಯನ್ನ ಉತ್ತಮವಾಗಿ ಎದುರಿಸಿದ್ದ ಕಾಫಿ ತರಗತಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇನ್ನು ಬಾಲಕಿ ಕಾಫಿಗೆ ದೆಹಲಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದು ನಂತರ ಐಎಎಸ್ ಅಧಿಕಾರಿಯಾಗುವುದು ಕನಸಾಗಿದ್ದು. ಈಗಾಗಲೇ ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೂ ಹಾಜರಾಗಿದ್ದು, ಶೀಘ್ರದಲ್ಲೇ ಪ್ರವೇಶ ಪಡೆಯುವ ಭರವಸೆಯಲ್ಲಿದ್ದಾರೆ.

RELATED ARTICLES

Related Articles

TRENDING ARTICLES