ಮುಂಬೈ: ಮರಾಠಿಯಲ್ಲಿ ಮಾತನಾಡದಿದ್ದರೆ ಪಿಜ್ಜಾಗೆ ಹಣ ಕೊಡುವುದಿಲ್ಲ ಎಂದು ಕಿರಿಕ್ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು. ದಂಪತಿಗಳಿಬ್ಬರು ಪಿಜ್ಜಾ ಡೆಲವರಿ ಬಾಯ್ಗೆ ಕನ್ನಡದಲ್ಲಿ ಮಾತನಾಡಲು ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ಭಾಂಡಪ್‌ನಲ್ಲಿರುವ ಸಾಯಿ ರಾಧೆ ಕಟ್ಟಡದಲ್ಲಿ ಘಟನೆಯಾಗಿದೆ ಎಂದು ವರದಿಯಾಗಿದೆ. ಪಿಜ್ಜಾ ಡೆಲವರಿ ಬಾಯ್ ರೋಹಿತ್ ಲಾವಾರೆ ಎಂಬಾತ ಪಿಜ್ಜಾ ಡೆಲವರಿ ಮಾಡಲು ಎಂದು ದಂಪತಿಗಳ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ಪಿಜ್ಜಾವನ್ನು ಪಡೆದಿದ್ದು. ಪಿಜ್ಜಾಗೆ ಹಣ ಪಾವತಿ ಮಾಡಲು ಮರಾಠಿಯಲ್ಲಿ ಮಾತನಾಡುವಂತೆ ಒತ್ತಡ ಏರಿದ್ದಾಳೆ. ಇದನ್ನೂ ಓದಿ :ವಿದೇಶಾಂಗ ಸಚಿವ ಜೈ ಶಂಕರ್ಗೆ ನೀಡಿದ್ದ ಭದ್ರತೆಯಲ್ಲಿ ದಿಢೀರ್ ಹೆಚ್ಚಳ..!
Kalesh over A customer refused to pay Domino’s Pizza delivery boy Rohit Levare for the pizza because Rohit did not know Marathi. The customer said that if he wanted the money, he would have to speak Marathi.
pic.twitter.com/AYkZSdLNUt— Ghar Ke Kalesh (@gharkekalesh) May 13, 2025
ಆದರೆ ಈ ವೇಳೆ ಪಿಜ್ಜಾ ಡೆಲವರಿ ಬಾಯ್ ‘ಮರಾಠಿಯಲ್ಲಿ ಮಾತನಾಡಲೇಬೇಕು ಅಂತ ಕಡ್ಡಾಯ ಇದೆಯೇ? ಏಕೆ? ಎಂದು. ಅದಕ್ಕೆ ಮರಾಠಿ ದಂಪತಿ, ಹೌದು ಇಲ್ಲಿ ಹಾಗೆಯೇ ಇದೆ ಎಂದು ಹೇಳಿದ್ದು. ಘಟನೆ ದೃಷ್ಯವನ್ನ ರೋಹಿತ್ ತನ್ನ ಕ್ಯಾಮಾರದಲ್ಲಿ ಸೆರೆಹಿಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ಘಟನೆ ಸಂಬಂಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.