ತುಮಕೂರು : ಐಸ್ ಕ್ರೀಂ ಫ್ಯಾಕ್ಟರಿಯ ಮಾಲೀಕ ನಾಗೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವಂತ ಮಗನೇ ತನ್ನ ತಂದೆ ನಾಗೇಶ್ನನ್ನು ಕೊಂದು ಬಳಿಕ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಾನೆ. ಆದರೆ ಕೊಲೆಯಾದ ಜಾಗದಲ್ಲಿದ್ದ ಸಿಸಿಟಿವಿ ಕ್ಯಾಮರಾ ಸಾವು ಆಕಸ್ಮಿಕವಲ್ಲ, ಇದು ಕೊಲೆ ಎಂಬ ಕ್ಲೂ ಕೊಟ್ಟಿದೆ.
ತುಮಕೂರು ಜಿಲ್ಲೆ ಕುಣಿಗಲ್ನಲ್ಲಿ ಮೇ.11 ರ ಮುಂಜಾನೆ ಕುಣಿಗಲ್ನ ಅಪೋಲೋ ಐಸ್ ಕ್ರೀಂ ಫ್ಯಾಕ್ಟರಿಯ ಮಾಲೀಕ 55 ವರ್ಷದ ನಾಗೇಶ್ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದ. ಕೈಬೆರಳುಗಳಿಗೆ ಕರೆಂಟ್ ಶಾಕ್ ಹೊಡೆದ ರೀತಿಯಲ್ಲಿ ಶವ ಪತ್ತೆಯಾದ ಹಿನ್ನೆಲೆ ಕುಟುಂಬಸ್ಥರು ಆತ ಕರೆಂಟ್ ಶಾಕ್ ಹೊಡೆದು ಸತ್ತಿರಬಹುದೆಂದು ಶಂಕಿಸಿದ್ದರು. ಕುಣಿಗಲ್ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದರು. ಬಳಿಕ ಶವ ಸಂಸ್ಕಾರವೂ ಮುಗಿಸಿದ್ದರು. ಆದರೆ ಐಸ್ ಕ್ರೀಂ ಫ್ಯಾಕ್ಟರಿಯ ಸಿಸಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ನಾಗೇಶ್ ಸಾವು ಸಹಜ ಸಾವಲ್ಲ ಎಂಬುದು ತಿಳಿದಿತ್ತು. ಇದನ್ನೂ ಓದಿ :ಸ್ವಂತ ಹೆಂಡತಿಯನ್ನೇ ಕಿಡ್ನಾಪ್ ಮಾಡಿದ ಗಂಡ; ಕಾರಣ ಕೇಳಿದರೆ ಶಾಕ್
ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರ..!
ಮೇ 11ರ ಬೆಳಗಿನ ಜಾವ 1.16 ಕ್ಕೆ ನಾಗೇಶ್ ಪುತ್ರ ಸೂರ್ಯ ಹಾಗೂ ಆತನ ಸ್ನೇಹಿತ ಧನುಷ್ ಫ್ಯಾಕ್ಟರಿ ಒಳಗೆ ಬಂದಿದ್ದರು . ಈ ವೇಳೆ ನಾಗೇಶ್ ಹಾಗು ಪುತ್ರ ಸೂರ್ಯನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳದಲ್ಲಿ ಸಿಕ್ಕಕೋಲಿನಿಂದ ನಾಗೇಶ್ ತನ್ನ ಮಗ ಸೂರ್ಯನಿಗೆ ಥಳಿಸೋಕೆ ಶುರು ಮಾಡಿದ್ದ. ಈ ವೇಳೆ ಸೂರ್ಯ ಹಾಗೂ ಧನುಷ್ ಏಕಾಏಕಿ ನಾಗೇಶ್ ಕುತ್ತಿಗೆಗೆ ಬಟ್ಟೆಯಿಂದ ಜೀರಿ ನೆಲಕ್ಕುರುಳಿಸಿ ಕೊಲೆಗೈದಿದ್ದಾನೆ. ನಾಗೇಶ್ ಪ್ರಾಣಬಿಟ್ಟ ಬಳಿಕ ಕೈ ಬೆರಳುಗಳಿಗೆ ಶಾಕ್ ಹೊಡೆಸಿ ಮಂಚದ ಮೇಲೆ ಮಲಗಿಸಿದ ಸೂರ್ಯ,ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ:ಆಪರೇಷನ್ ಸಿಂಧೂರ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿದ ಟೆಕ್ಕಿ ಅರೆಸ್ಟ್
ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಸೂರ್ಯ ಸಿಸಿ ಕ್ಯಾಮೆರಾದ ವೈರ್ ಗಳನ್ನ ಕಟ್ ಮಾಡಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ. ಕರೆಂಟ್ ಶಾಕ್ ಹೊಡೆದು ನಾಗೇಶ್ ಸಾವು ಎಂದು ಸೂರ್ಯ ಬಿಂಬಿಸಿದ್ದ. ಸ್ಥಳಕ್ಕಾಗಮಿಸಿದ್ದ ಪೊಲೀಸರು, ಸಿಸಿ ಕ್ಯಾಮೆರಾದ ವೈರ್ ಕಟ್ ಆಗಿರೋದು ಕಂಡು ಅನುಮಾನಗೊಂಡು ಡಿವಿಆರ್ ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಗ ಸೂರ್ಯನೇ ತನ್ನ ಸ್ನೇಹಿತ ಧನುಷ್ ಜೊತೆಗೂಡಿ ತಂದೆ ನಾಗೇಶ್ ನನ್ನ ಕೊಲೆಗೈದಿರೋದು ಪತ್ತೆಯಾಗಿದೆ.
ಇದನ್ನೂ ಓದಿ :ಭಾರತದ ರಕ್ಷಣೆಗೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಅಗತ್ಯವಿದೆ
ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದಿದ್ದು. ನಾಗೇಶ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಎಂದು ಯುವಕ ಆರೋಪ ಮಾಡಿದ್ದಾರೆ. ಇದರ ಜೊತೆಗೆ ಆಸ್ತಿ ವಿಚಾರವಾಗಿ ಕಲಹ ಇತ್ತು ಎಂದು ಹೇಳಲಾಗ್ತಿದೆ. ಆ ವಿಚಾರವಾಗಿಯೂ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನಾಗೇಶ್ ಪುತ್ರ ಸೂರ್ಯ,ಆತನ ಸ್ನೇಹಿತರಾದ ಧನುಷ್,ಮನು, ಮೂರ್ತಿ, ಲಿಖಿತ್, ಗಂಗಾಧರ್ ಗೌಡ, ಉಲ್ಲಾಸ್ ಸೇರಿ ಒಟ್ಟು 8 ಜನರನ್ನ ಬಂಧಿಸಲಾಗಿದೆ. ಪೊಲೀಸರ ತನಿಖೆ ಬಳಿಕವಷ್ಟೆ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕು ಅನ್ನೋ ಹಾಗೆ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಬೇರೆ ಬೇರೆ ಪ್ಲಾನ್ ಮಾಡಿದ್ದ ಮಗನಿಗೆ ಸಿಸಿ ಕ್ಯಾಮೆರಾ ತಕ್ಕ ಶಾಸ್ತಿ ಮಾಡಿದೆ.