Tuesday, May 13, 2025

ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಭೇಟಿಯಾದ ವಿರಾಟ್​, ಅನುಷ್ಕಾ ದಂಪತಿ

ದೆಹಲಿ : ಟೀಮ್​ ಇಂಡಿಯಾದ ಆಟಗಾರ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದು. ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅವರು ವೃಂದಾವನದ ಸ್ವಾಮಿ ಪ್ರೇಮಾನಂದ್ ಮಹರಾಜ್​ರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದಾರೆ.

ಮೇ 12, ಸೋಮವಾರದಂದು ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ತಮ್ಮ ನಿವೃತ್ತಿಯನ್ನು ಘೋಷಿಸುತ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ದಂಪತಿಗಳು ವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು ಎಎನ್​ಐ ಸುದ್ದಿಸಂಸ್ಥೆ ಹಂಚಿಕೊಂಡಿದ್ದು. ಈ ವಿಡಿಯೋದಲ್ಲಿ ವಿರಾಟ ಮತ್ತು ಅನುಷ್ಕಾ ಸ್ವಾಮಿ ಪ್ರೇಮಾನಂದ ಅವರ ಮುಂದೆ ಕಾಲು ಮಡಚಿ ಕುಳಿತಿರುವುದನ್ನು ಕಾಣಬಹುದು.

ಈ ದಂಪತಿಗಳು ಆಧ್ಯಾತ್ಮಿಕ ನಾಯಕನನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ ಮತ್ತು ನಿಯಮಿತವಾಗಿ ಅವರ ಸತ್ಸಂಗಗಳಿಗೆ ಹಾಜರಾಗಿದ್ದಾರೆ. ಆಗಾಗ್ಗೆ ತಮ್ಮ ಮಕ್ಕಳಾದ ವಾಮಿಕ ಮತ್ತು ಅಕಾಯ್ ಅವರನ್ನು ಕರೆತರುತ್ತಾರೆ. ಕಳೆದ ಆಸ್ಟ್ರೇಲಿಯಾ ಸೀರಿಸ್​ ಮುಗಿಸಿ ವಾಪಸಾಗಿದ್ದ ವಿರಾಟ್​ ಪತ್ನಿ ಮಕ್ಕಳೊಂದಿಗೆ ವೃಂದಾವನಕ್ಕೆ ಭೇಟಿ ನೀಡಿದ್ದರು.

RELATED ARTICLES

Related Articles

TRENDING ARTICLES