ಪಂಜಾಬ್ : ಇಂದು (ಮೇ.08) ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬಿನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ್ದು. ಇಲ್ಲಿ ಮಾತನಾಡಿದ ಮೋದಿ ” ದೇಶದೊಳಗೆ ಬಂದು ಕೃತ್ಯವೆಸಗಿದ ಹೇಡಿಗಳು ಭಾರತೀಯ ಸೇನೆಗೆ ಸವಾಲು ಹಾಕಿದ್ದಾರೆ ಎಂಬುದನ್ನ ಮರೆತಿದ್ದಾರೆ. ನಮ್ಮ ಸೈನಿಕರು ಅವರನ್ನು ನೇರವಾಗಿ ಹೊಡೆದಿದ್ದಾರೆ ಎಂದು ಹೇಳಿದರು.
ಅದಮ್ಪುರದಲ್ಲಿ ಮಾತನಾಡಿದ ಮೋದಿ “ನಮ್ಮ ಸೈನ್ಯಗಳು ಪರಮಾಣು ಬೆದರಿಕೆಯನ್ನು ಹೊಡೆದೋಡಿಸಿದಾಗ ಆಕಾಶದಿಂದ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ ಅದು ‘ಭಾರತ್ ಮಾತಾ ಕಿ ಜೈ’. ನೀವೆಲ್ಲರೂ ಲಕ್ಷಾಂತರ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ಪ್ರತಿಯೊಬ್ಬ ಭಾರತೀಯನ ತಾಯಿಯನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ಅದಕ್ಕಾಗಿಯೇ ನಾನು ಇಂದು ಬೆಳಿಗ್ಗೆ ನಿಮ್ಮನ್ನು ನೋಡಲು ನಿಮ್ಮ ನಡುವೆ ಬಂದಿದ್ದೇನೆ” ಎಂದು ಮೋದಿ ಸೈನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ :ಆಟವಾಡುವ ವಿಚಾರಕ್ಕೆ ಜಗಳ: ಸ್ನೇಹಿತನ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ 13 ವರ್ಷದ ಬಾಲಕ
ನಮ್ಮ ಸೈನಿಕರು ಪ್ರತಿಯೊಬ್ಬರು ಹೆಮ್ಮೆ ಪಡುವಂತ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಸೈನಿಕರು ಭಾರತದ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಇಂತಹ ಧೀರ ಸೈನಿಕರಿಗಾಗಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಎಲ್ಲಾ ಭಾರತೀಯರು ಸೈನಿಕರ ಪಕ್ಕದಲ್ಲಿ ನಿಂತು, ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದರು ಎಂದು ಶ್ರೀ ಮೋದಿ ಹೇಳಿದರು.
ಇದನ್ನೂ ಓದಿ :ಮಿನಿ ಬಸ್ ಪಲ್ಟಿ: ಏಪೋರ್ಟ್ ಸಿಬ್ಬಂದಿಗಳಿಗೆ ಗಂಭೀರ ಗಾಯ
ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡಿದ ಮೋದಿ “ಆಪರೇಷನ್ ಸಿಂಧೂರ್ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಣಾಯಕ ಶಕ್ತಿಯ ಸಾಕಾರವಾಗಿದೆ. ಭಯೋತ್ಪಾದಕರು ಹೇಡಿಗಳಂತೆ ದೇಶದೊಳಗೆ ಬಂದರು ಕೃತ್ಯವೆಸಗಿದ್ದಾರೆ, ಆದರೆ ಅವರು ಭಾರತೀಯ ಸೇನೆಗೆ ಸವಾಲು ಹಾಕಿದ್ದಾರೆ ಎಂಬುದನ್ನು ಮರೆತಿದ್ದಾರೆ. ನೀವು ಅವರ ಮೇಲೆ ನೇರವಾಗಿ, ಮುಂಭಾಗದಿಂದ ಹೊಡೆದಿದ್ದೀರಿ. ನಾಗರಿಕರ ರಕ್ತವನ್ನು ಚೆಲ್ಲುವ ಬೆಲೆ ವಿನಾಶವನ್ನು ಮಾತ್ರ ಆಹ್ವಾನಿಸುತ್ತದೆ ಎಂಬುದನ್ನು ಇದು ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.