ಬೀದರ್: ಕುಡಿದು ಗಲಾಟೆ ಮಾಡುತ್ತಾನೆ ಎಂದು ಸ್ವಂತ ಮಗನೇ ಹೆತ್ತ ತಂದೆಯನ್ನು ಕೊಲೆ ಮಾಡಿರುವ ಘಟನೆ ಬೀದರ್ನಲ್ಲಿ ನಡೆದಿದ್ದು. ಕೊಲೆಯಾದ ವ್ಯಕ್ತಿಯನ್ನು 52 ವರ್ಷದ ಶಿವಕುಮಾರ್ ಎಂದು ಗುರುತಿಸಿದ್ದು. ಕೊಲೆ ಮಾಡಿದ ಆರೋಪಿ ರೇವಣ್ಣಪ್ಪಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಘಟನೆ ನಡೆದಿದ್ದು. ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ 52 ವರ್ಷದ ಶಿವಕುಮಾರ್ ಕುಡಿತದ ಚಟವನ್ನ ಮೈಗಂಟಿಸಿಕೊಂಡಿದ್ದನು, ಇದೇ ಕುಡಿತದ ಚಟ ಇಂದು ಆತನನ್ನ ಚಟ್ಟ ಏರುವಂತೆ ಮಾಡಿದ್ದು, ನಿತ್ಯ ಕುಡಿದು ಗಲಾಟೆ ಮಾಡುತ್ತಾನೆ, ಊರಿನಲ್ಲಿ ಕುಟುಂಬದ ಮರ್ಯಾದೆ ಕಳೆಯುತ್ತಿದ್ದಾನೆ ಅಂತಾ ಸ್ವಂತ ಮಗನೆ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇದನ್ನೂ ಓದಿ :ಹೇಡಿಗಳಂತೆ ಕೃತ್ಯವೆಸಗಿದ ಉಗ್ರರು, ಭಾರತೀಯ ಸೇನೆಗೆ ಸವಾಲು ಹಾಕಿದ್ದೀವಿ ಎಂದು ಮರೆತಿದ್ದಾರೆ: ಮೋದಿ
ಇನ್ನು ಈ ಘಟನೆಯ ಹಿನ್ನಲೆಯನ್ನ ನೋಡುವುದಾದರೆ ಕೊಲೆಯಾದ ಶಿವಕುಮಾರ್ ಕುಡಿದು ಗಲಾಟೆ ಮಾಡುತ್ತಾನೆ ಎಂದು ಮನೆಯವರು ಕಳೆದ ಕೆಲ ದಿನಗಳಿಂದ ಮನೆಯಿಂದ ಹೊರ ಹಾಕಿದ್ದರು. ಮನೆಯಿಂದ ಹೊರಗೆ ಬಂದಿದ್ದ ಶಿವಕುಮಾರ್ ತನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದ. ತಾನಾಯ್ತು, ತನ್ನ ಜೀವನವಾಯ್ತು ಎಂದು ಜೀವನ ನಡೆಸುತ್ತಿದ್ದ ಶಿವಕುಮಾರ್ ಭಾನುವಾರ ಪರಿಚಯಸ್ಥರ ಮದುವೆಯಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡುತ್ತಿದ್ದ.
ಈ ವೇಳೆ ಇದನ್ನು ನೋಡಿದ ಮಗ ರೇವಣ್ಣಪ್ಪಾ ತಂದೆಯ ಜೊತೆ ವಾಗ್ವಾದಕ್ಕೆ ಇಳಿದಿದ್ದು. ಮದುವೆ ಕಾರ್ಯದಲ್ಲಿ ಡ್ಯಾನ್ಸ್ ಮಾಡಿ ಮರ್ಯಾದೆ ಕಳಿಬೇಡಿ ಎಂದು ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಮಗನಿಂದ ತಪ್ಪಿಸಿಕೊಂಡ ತಂದೆ ಬೇಲೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದತ್ತ ತೆರಳಿದ್ದಾನೆ. ಆದರೆ ತಂದೆಯನ್ನ ಬೆನ್ನತ್ತಿದ್ದ ಪಾಪಿ ಮಗ ರೇವಣ್ಣಪ್ಪಾ ಶಾಲಾ ಆವರಣದಲ್ಲೇ ತಂದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ :ಆಟವಾಡುವ ವಿಚಾರಕ್ಕೆ ಜಗಳ: ಸ್ನೇಹಿತನ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ 13 ವರ್ಷದ ಬಾಲಕ
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುಲಸೂರು ಪೊಲೀಸರು. ಮೃತನ ಮಗಳ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಪುತ್ರ ರೇವಣಪ್ಪಾನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ರೇವಣಪ್ಪಾ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.