ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಿಗ್ಗೆ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ್ದು. ವಾಯುಪಡೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದಾರೆ. ಈ ಕುರಿತಾದ ಪೋಟೊಗಳನ್ನು ಮೋದಿ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದು, ದೇಶ ಕಾಯುವ ಯೋಧರೊಂದಿಗೆ ಇರುವುದು ವಿಶೇಷ ಅನುಭವ ಎಂದು ಹೇಳಿಕೊಂಡಿದ್ದಾರೆ.
ಮೇ 7 ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ತೀವ್ರ ಸಂಘರ್ಷದ ದಿನಗಳ ನಂತರ ಮೋದಿ ಅವರು ಇಂದು ಮುಂಜಾನೆ ಆದಂಪುರ ವಾಯುನೆಲೆಗೆ ತೆರಳಿದ್ದರು. ವಾಯುಪಡೆಯ ಸಿಬ್ಬಂದಿ ಅವರಿಗೆ ಮಾಹಿತಿ ನೀಡಿದರು ಮತ್ತು ಅವರು ನಮ್ಮ ಧೈರ್ಯಶಾಲಿ ಯೋಧರೊಂದಿಗೆ ಸಂವಹನ ನಡೆಸಿದರು.
ಇದನ್ನೂ ಓದಿ :POK ಬಿಟ್ಟುಕೊಟ್ಟಾಗಿದೆ ಅದನ್ನ ಕೇಳೋದು ಸೂಕ್ತವಲ್ಲ, ಈಗ ಪಾಕ್ಗೆ ಬುದ್ದಿ ಕಲಿಸಬೇಕು: ಆರ್. ಅಶೋಕ್
ಈ ಕುರಿತಾದ ಪೋಟೊಗಳನ್ನ ಮೋದಿ ತಮ್ಮ ಸಾಮಾಜಿಕ ಜಾಲಾತಾಣ ಎಕ್ಷ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು. “ಇಂದು ಬೆಳಿಗ್ಗೆ, ನಾನು AFS ಆದಂಪುರಕ್ಕೆ ಹೋಗಿ ನಮ್ಮ ಕೆಚ್ಚೆದೆಯ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ಅವರಿಗೆ ಭಾರತವು ಶಾಶ್ವತವಾಗಿ ಕೃತಜ್ಞವಾಗಿದೆ” ಎಂದು ಬರೆದುಕೊಂಡಿದ್ದಾರೆ.