ವಿಶ್ವ ಶ್ರೇಷ್ಟ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಅವರಿಗೆ ಗೌರವ ಸಲ್ಲಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮುಂದಿನ ಪಂದ್ಯದಲ್ಲಿ ಆರ್ಸಿಬಿ ಅಭಿಮಾನಿಗಳು ಬಿಳಿ ಜರ್ಸಿ ಧರಿಸಿ ಬರಲು ಕರೆ ನೀಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗುತ್ತಿದ್ದು. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ :ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಮೇಲೆ ಲಾರಿ ಹತ್ತಿಸಿದ ಚಾಲಕ: ಕಾನ್ಸ್ಟೇಬಲ್ ಸಾ*ವು
ವಿರಾಟ್ ಕೊಹ್ಲಿ ನಿನ್ನೆ(ಮೆ.12) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಈ ಸುದ್ದಿ ಅನೇಕರಿಗೆ ನಂಬಲು ಸಾಧ್ಯವಾಗದಂತಹ ಸುದ್ದಿಯಾಗಿತ್ತು. ಆದರ ಇದೀಗ ವಿರಾಟ್ಗೆ ಗೌರವ ಸೂಚಿಸಲು ಎಂದು ಸಾಮಾಜಿಕ ಬಳಕೆದಾರರೊಬ್ಬರು ಅಭಿಯಾನ ಆರಂಭಿಸಿದ್ದು. ಈ ಕುರಿತಾದ ಪೋಸ್ಟ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಏನಿದೆ ಪೋಸ್ಟ್ನಲ್ಲಿ..!
ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಅಭಿಮಾನಿಯೋರ್ವ ” ಬೆಂಗಳೂರಿನ ಹುಡುಗರೇ, ನಿಮ್ಮಲ್ಲಿ ಅನೇಕರು ಟೆಸ್ಟ್ ಕ್ರಿಕೆಟ್ನ್ನು ನೋಡುವಂತೆ ಮಾಡಿದ್ದು ವಿರಾಟ್ ಕೊಹ್ಲಿ, ಆದರೆ ಅವರು ಇನ್ನು ಎಂದಿಗೂ ಬಿಳಿ ಜರ್ಸಿಯಲ್ಲಿ ಆಡುವುದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕುರಿತು ದಯವಿಟ್ಟು ಯೋಚಿಸಿ. ಆರ್ಸಿಬಿಯ ಮುಂದಿನ ಪಂದ್ಯದಂದು ಸ್ಟೇಡಿಯಂ ಹೊರಗೆ ಜರ್ಸಿಗಳನ್ನ ಹಂಚಲು ನಿಧಿ ಸಂಗ್ರಹ ಮಾಡೋಣ. ಒಂದು ವೇಳೆ ಜರ್ಸಿ ಹಾಗದಿದ್ದರು ಬಿಳಿ ಟೀಶರ್ಟ್ಗಳನ್ನ ನೀಡೋಣ. ಇದು ನಮಗೆ ಒಳ್ಳೆ ಅವಕಾಶ ಎಂದು ಬರೆದುಕೊಂಡಿದ್ದಾರೆ.