ಒಂದು ಚಿತ್ರ ಶೀರ್ಷಿಕೆಗಾಗಿ ಇಬ್ಬರು ಹೋರಾಟ ನಡೆಸುತ್ತಿದ್ದು. ನಾಯಕ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ತೇಜ್ರವರು ತಮ್ಮ ಸಿನಿಮಾಗೆ DUDE ಎಂದು ಹೆಸರಿಟ್ಟಿದ್ದು. ಅತ್ತ ಡ್ರ್ಯಾಗನ್ ಸಿನಿಮಾ ಖ್ಯಾತಿಯ ನಿರ್ದೇಶಕ-ನಟ ಪ್ರದೀಪ್ ರಂಗನಾಥನ್ ಅವರ ಪ್ಯಾನ್-ಇಂಡಿಯಾ ಚಿತ್ರಕ್ಕೆ DUDE ಎಂಬ ಶೀರ್ಷಿಕೆಯನ್ನ ಬಹಿರಂಗ ಪಡಿಸಿದ್ದಾರೆ. ಇದಕ್ಕೆ ನಟ ತೇಜ್ ಆಘಾತ ವ್ಯಕ್ತಪಡಿಸಿದ್ದಾರೆ.
ನಾಯಕ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ತೇಜ್ ಮೂರು ಭಾಷೆಗಳಲ್ಲಿ DUDE ಎಂಬ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತೇಜ್ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿರುವ ತ್ರಿಭಾಷಾ ಚಿತ್ರವಾದ DUDE ನಲ್ಲಿ ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದಾರೆ. ಫುಟ್ಬಾಲ್ ಸುತ್ತ ಕೇಂದ್ರೀಕೃತ ಮತ್ತು ತೀವ್ರವಾದ ಭಾವನೆಗಳಿಂದ ಕೂಡಿದ ಈ ಚಿತ್ರವು, ಉತ್ಸಾಹಿ ಫುಟ್ಬಾಲ್ ಪ್ರೇಮಿ ದಿವಂಗತ ಕನ್ನಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಸಮರ್ಪಿತವಾಗಿದೆ. ಇದನ್ನೂ ಓದಿ :ಕುಡಿದು ಮರ್ಯಾದೆ ಕಳೆಯುತ್ತಾನೆ ಎಂದು ಹೆತ್ತ ತಂದೆಯನ್ನೇ ಕೊ*ಲೆ ಮಾಡಿದ ಮಗ
ಹಿರಿಯ ನಟ ರಂಗಾಯಣ ರಘು ಅವರು ಕೂಡ ಫುಟ್ಬಾಲ್ ತರಬೇತುದಾರನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದು. ಚಿತ್ರವು ಶೀಘ್ರದಲ್ಲೇ ಬಿಡುಗಡೆ ದಿನವನ್ನು ಘೋಷಿಸಲಿದೆ. ಈಗಾಗಲೇ ಪೋಸ್ಟ್ ಪ್ರೊಡೆಕ್ಷನ್ ಕೆಲಸ ಪ್ರಗತಿಯಲ್ಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್ನಲ್ಲಿ ತೆಲುಗು, ಕನ್ನಡ, ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ.
ಆದರೆ ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇದೇ DUDE ಶೀರ್ಷಿಕೆಯನ್ನ ಪ್ರದೀಪ್ ರಂಗನಾಥನ್ ಅಭಿನಯಿಸುತ್ತಿರುವ ಸಿನಿಮಾಗೆ ಘೋಷಿಸಿದ್ದು. ಇದಕ್ಕೆ ಕನ್ನಡದ ತೇಜ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು “ಮೈತ್ರಿಯಂತಹ ಉನ್ನತ ಮಟ್ಟದ ನಿರ್ಮಾಣ ಸಂಸ್ಥೆಯ ವಿರುದ್ಧ ಹೋರಾಡುವ ಉದ್ದೇಶವಿಲ್ಲ, ಆದರೆ ಇರುವ ಗೊಂದಲಗಳನ್ನ ನಿವಾರಿಸಲು ನಾವು ಮೈತ್ರಿ ಮೂವಿ ಮೇಕರ್ಸ್ ನಿರ್ವಾಹಕ ಅನಿಲ್ ಜೊತೆ ಮಾತುಕತೆ ನಡೆಸಿದ್ದು. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ :ಹೇಡಿಗಳಂತೆ ಕೃತ್ಯವೆಸಗಿದ ಉಗ್ರರು, ಭಾರತೀಯ ಸೇನೆಗೆ ಸವಾಲು ಹಾಕಿದ್ದೀವಿ ಎಂದು ಮರೆತಿದ್ದಾರೆ: ಮೋದಿ
ಇನ್ನು ತೇಜ್ ಅಭಿನಯಿಸುತ್ತಿರುವ DUDE ಸಿನಿಮಾಗೆ ಕಳೆದ ಒಂದು ವರ್ಷದಿಂದ ಪ್ರಮೋಷನ್ ನಡೆಸುತ್ತಿದ್ದು. ಈ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ನಟಿಸಿದ್ದು. ಸ್ಕ್ರಿಪ್ಟ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಸುಂದರ್ ರಾಜ್, ಸ್ಪರ್ಶ್ ರೇಖಾ ಮತ್ತು ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಮಹತ್ವಾಕಾಂಕ್ಷ ಚಿತ್ರವು ಪನೋರಮಿಕ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಈ ಚಿತ್ರದ PRO ಧೀರಜ್ – ಅಪ್ಪಾಜಿ. ಜಿಂಕೆ ಮಾರಿ ಖ್ಯಾತಿಯ ಎಮಿಲ್ ಮೊಹಮ್ಮದ್ ಸಂಗೀತ ಸಂಯೋಜಿಸಿದ್ದು, ಅಲಾ ಮೊದಲಿಂದಿ ಖ್ಯಾತಿಯ ಪ್ರೇಮ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ.