Tuesday, May 13, 2025

ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊ*ಲೆ: ಗ್ರಾಮಸ್ಥರಿಂದ ಪ್ರತಿಭಟನೆ

ರಾಮನಗರ: ರಾಮನಗರದಲ್ಲಿ ಮಾನವ ಕುಲವೇ ತಲೆತಗ್ಗಿಸುವ ಘಟನೆ ನಡೆದಿದ್ದು. ದುಷ್ಕರ್ಮಿಗಳು 14 ವರ್ಷದ ವಿಕಲಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯನ್ನ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಬಾಲಕಿಯನ್ನ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ತಾಲೂಕಿನ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿ ಬಳಿ ನಡೆದಿದೆ. 14 ವರ್ಷದ ಖುಷಿ ಮೃತ ದುರ್ದೈವಿ. ಅಂದಹಾಗೆ ತಂದೆಯನ್ನ ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆಯುತ್ತಿರುವ ಖುಷಿಗೆ ಮಾತು ಬರಲ್ಲ, ಕಿವಿಯೂ ಕೇಳಲ್ಲ. ಎಂದಿನಂತೆ ಗ್ರಾಮದಲ್ಲಿ ಆಟವಾಡಿಕೊಂಡಿದ್ದ ಖುಷಿ ಮೊನ್ನೆ ಸಂಜೆ ಐದು ಗಂಟೆ ನಂತರ ನಾಪತ್ತೆಯಾಗಿದ್ದಳು‌.

ಇದನ್ನೂ ಓದಿ :DUDE ಸಿನಿಮಾ ಶೀರ್ಷಿಕೆಗಾಗಿ ಜಟಾಪಟಿ; ಮೈತ್ರಿ ಮೂವಿ ಮೇಕರ್ಸ್​ ಜೊತೆ ಮಾತುಕತೆ

ರಾತ್ರಿ ಮನೆಗೆ ವಾಪಾಸ್ ಬರಬಹುದು ಎಂದು ಕುಟುಂಬಸ್ಥರು ಸಹಾ ಅಂದುಕೊಂಡಿದ್ದಳು. ಆದರೆ ರಾತ್ರಿ ಎಷ್ಟು ಹೊತ್ತಾದರೂ ಸಹಾ ಮನೆಗೆ ಆಕೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು, ಸಂಬಂಧಿಕರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಮಾರನೇ ದಿನ ಬೆಳಗ್ಗೆ ಗ್ರಾಮದ ರೈಲ್ವೆ ಟ್ರಾಕ್ ಪಕ್ಕದಲ್ಲಿ ಮೃತದೇಹ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಬಾಲಕಿಯನ್ನ ಕರೆದೊಯ್ದು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ :ಕುಡಿದು ಮರ್ಯಾದೆ ಕಳೆಯುತ್ತಾನೆ ಎಂದು ಹೆತ್ತ ತಂದೆಯನ್ನೇ ಕೊ*ಲೆ ಮಾಡಿದ ಮಗ

ಗ್ರಾಮಸ್ಥರಿಂದ ಪ್ರತಿಭಟನೆ..!

ಇನ್ನೂ ಬಾಲಕಿ ಕೊಲೆ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಪಕ್ಕದ ರೈಲ್ವೆ ಟ್ರ್ಯಾಕ್ ಪಕ್ಕ ಕೆಲ ಕಿಡಿಗೇಡಿಗಳು ನಿತ್ಯ ಗಾಂಜಾ ಸೇವನೆ ಮಾಡಿ ಗಲಾಟೆ ಮಾಡುತ್ತಾರೆ. ಅಲ್ಲದೇ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ವಿದ್ಯುತ್ ದೀಪ ಇಲ್ಲ, ಮನೆ ಬಳಿ ಆಟವಾಡ್ತಿದ್ದ ಬಾಲಕಿಯನ್ನ ಕತ್ತಲೆಯಲ್ಲಿ ಎಳೆದೋಯ್ದು ವಿಕೃತಿ ಮೆರೆದಿದ್ದಾರೆ. ಬಾಲಕಿ ಸಾವಿಗೆ ನ್ಯಾಯದೊರಕಿಸಿಕೊಡಬೇಕು. ಗ್ರಾಮಕ್ಕೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ‌.

ಇನ್ನೂ ಬಿಡದಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶ್ವಾಸದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವಿಚಾರ ತಿಳಿದು ಗ್ರಾಮಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಬಾಲಕಿ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಶಾಸಕರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದು ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಂತಹ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ :ಹೇಡಿಗಳಂತೆ ಕೃತ್ಯವೆಸಗಿದ ಉಗ್ರರು, ಭಾರತೀಯ ಸೇನೆಗೆ ಸವಾಲು ಹಾಕಿದ್ದೀವಿ ಎಂದು ಮರೆತಿದ್ದಾರೆ: ಮೋದಿ

ಈ ವೇಳೆ ಗ್ರಾಮಸ್ಥರನ್ನ ಸಮಾಧಾನಪಡಿಸಿದ ಶಾಸಕ ಕೂಡಲೇ ವಿದ್ಯುತ್ ದೀಪ, ಹೈಮಾಸ್ಕ್ ಲೈಟ್ ಹಾಗೂ ನಿರಂತರ ಪೊಲೀಸ್ ಬೀಟ್ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದು, ಆರೋಪಿಗಳ ಶೀಘ್ರ ಪತ್ತೆ ಮಾಡುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಪುಂಡುಪೊಕರಿಗಳ ಆಟಾಟೋಪ ಕಡಿವಾಣ ಹಾಕಿ ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES