ಕಲಬುರಗಿಯ ಬುದ್ದ ವಿಹಾರದಲ್ಲಿ ನಡೆದ ಬುದ್ದ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ “ಪ್ರಪಂಚದ ಹಲವೆಡೆ ಸಾಕಷ್ಟು ಸಂಘರ್ಷಗಳು ನಡೆಯುತ್ತಿವೆ, ಇವುಗಳು ಪ್ರಪಂಚಕ್ಕೆ ಹಾನಿಕರ, ಆದರೆ ಕೆಲವೊಮ್ಮ ಸಂಘರ್ಷಗಳು ಅನಿವಾರ್ಯವಾಗುತ್ತವೆ, ನಮ್ಮ ದೇಶ ಉಳಿಸಿಕೊಳ್ಳಲು ಯುದ್ದ ಬಹಳ ಮುಖ್ಯ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಬುದ್ದ ಪೂರ್ಣಿಮ ನಿಮಿತ್ತ ಮಾತನಾಡಿದ ಖರ್ಗೆ ” ಈಗ ಭಾರತ ಪಾಕಿಸ್ತಾನ ನಡುವೆ ಹಾಗೂ ವಿಶ್ವದ ಬೇರೆ ಬೇರೆ ದೇಶಗಳ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಇದು ಪ್ರಪಂಚಕ್ಕೆ, ಮನುಷ್ಯ ಜೀವಿಗೆ ಇದೊಂದು ದೊಡ್ಡ ಹಾನಿಕಾರಕ. ಆದರೆ ಕೆಲವು ಸಲ ಅನಿವಾರ್ಯ ಇದ್ದಾಗ ನಮ್ಮ ದೇಶ ಉಳಿಸಿಕೊಳ್ಳಲು ಯುದ್ಧ ಬಹಳ ಮುಖ್ಯ ಆಗುತ್ತದೆ. ಮೊದಲನೇಯದಾಗಿ ನಮ್ಮ ದೇಶದ ಜನರೆಲ್ಲರೂ ಒಗ್ಗಟ್ಟಾಗಿರಬೇಕು
ದೇಶ ಉಳಿದರೆ ಮಾತ್ರ ನಾವೆಲ್ಲಾ ಉಳಿತಿವಿ ಬೆಳಿತಿವಿ, ಬಾಳತಿವಿ ಎಂದು ಹೇಳಿದರು. ಇದನ್ನೂ ಓದಿ :ಯುದ್ದವೆಂಬುದು ರೋಮ್ಯಾಂಟಿಕ್ ಬಾಲಿವುಡ್ ಸಿನಿಮಾ ಅಲ್ಲ: ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ
ಮುಂದುವರಿದು ಮಾತನಾಡಿದ ಖರ್ಗೆ ” ದೇಶದ ಸಂವಿದಾನ ಉಳಿಸಬೇಕದರೆ, ದೇಶ ಉಳಿಬೇಕು. ಹಾಗಾಗಿ ನಾವು ದೇಶದ ಬಗ್ಗೆ ಒಗ್ಗಟ್ಟಾಗಿ ಸಂಘರ್ಷ ಮಾಡುವುದನ್ನು ಕಲಿಯಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಸೇರಿ ದೇಶ ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಬೇಕು. ನಮ್ಮ ದೇಶದ ಮೇಲೆ ಅನೇಕ ಸಲ ದಾಳಿಗಳು ಆಗಿವೆ, ಈ ದಾಳಿಗಳನ್ನ ನಾವು ಎದುರಿಸಿದ್ದೇವೆ. ಪಾಕಿಸ್ತಾನ ದಾಳಿ ನಡೆಸಿದಾಗ ಮೂರು ಸಲ ಅವರಿಗೆ ಪಾಠ ಕಲಿಸಿದ್ದೇವೆ. ಇದನ್ನೂ ಓದಿ :ಮೋದಿ ಬದಲು ಟ್ರಂಪ್ ವಿಶ್ವಗುರು ಆಗಿದ್ದಾರೆ, ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ: ಹರಿಪ್ರಸಾದ್
ಆದರೆ ಈಗಲೂ ಪಾಕಿಸ್ತಾನ ನಮ್ಮ ದೇಶಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಆದರೆ ಅದನ್ನು ಎದುರಿಸುವ ಶಕ್ತಿ ನಮ್ಮ ಸೈನಿಕರಲ್ಲಿದೆ, ನಮ್ಮ ಶಕ್ತಿಶಾಲಿ ಸೈನ್ಯ ಎಂದೂ ಸೋಲು ಕಂಡಿಲ್ಲ. ಇಂತಹ ನಮ್ಮ ಸೈನಿಕರಿಗೆ ನನ್ನ ನಮನ. ಈ ಯುದ್ದದಲ್ಲಿ ಬಲಿದಾನ ಕೊಟ್ಟಂತ ಸೈನಿಕರಿಗೆ ನಮನ ಸಲ್ಲಿಸುವೆ. ನಮ್ಮ ದೇಶ ಬಹಳ ಗಟ್ಟಿಯಾದ ದೇಶ, ಆದ್ರೆ ಇಂತಹ ದೇಶದಲ್ಲಿ ಜಾತಿಯತೆ, ಅಸ್ಪೃಶ್ಯತೆ ಈಗಲೂ ಇದೆ.
ಅದಕ್ಕೆ ಬಸವಣ್ಣನವರು, ಮಹಾತ್ಮ ಫುಲೆ, ಕಬೀರ, ಅಂಬೇಡ್ಕರ್ ಅವರು ಹೋರಾಟ ಮಾಡಿದ್ದಾರೆ. ಯುದ್ದ ಸಂಕಟದ ಸಮಯದಲ್ಲಿ ಸಾಮಾನ್ಯ ಜನರಿಗೆ ದೈರ್ಯ ತುಂಬಬೇಕು, ಯಾರೂ ಗಾಬರಿ ಪಡಬಾರದು. ದೇಶದ ನಾಗರೀಕರು ಸಣ್ಣ ಪುಟ್ಟ ಕ್ಷುಲ್ಲಕ ಮಾತು ಬಿಡಬೇಕು ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ದೇಶದ ಜನರಿಗೆ ಮಲ್ಲಿಕಾರ್ಜುನ್ ಖರ್ಗೆ ಕರೆ ನೀಡಿದರು.