Sunday, August 24, 2025
Google search engine
HomeUncategorizedಯುದ್ದವೆಂಬುದು ರೋಮ್ಯಾಂಟಿಕ್​ ಬಾಲಿವುಡ್​ ಸಿನಿಮಾ ಅಲ್ಲ: ಮಾಜಿ ಸೇನಾ ಮುಖ್ಯಸ್ಥ ಮನೋಜ್​ ನರವಾಣೆ

ಯುದ್ದವೆಂಬುದು ರೋಮ್ಯಾಂಟಿಕ್​ ಬಾಲಿವುಡ್​ ಸಿನಿಮಾ ಅಲ್ಲ: ಮಾಜಿ ಸೇನಾ ಮುಖ್ಯಸ್ಥ ಮನೋಜ್​ ನರವಾಣೆ

ದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಜನರು ಒತ್ತಾಯಿಸುತ್ತಿದ್ದು. ಈ ಕುರಿತು ಮಾತನಾಡಿರುವ ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ “ಯುದ್ದವೆಂಬುದು ಬಾಲಿವುಡ್​ ಸಿನಿಮಾ ಅಲ್ಲ, ಯುದ್ದವೆಂಬುದು ಯಾವಗಲೂ ಕೊನೆಯ ಅಸ್ತ್ರವಾಗಿರಬೇಕು ಎಂದು ಒತ್ತಿ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನೋಜ್​ ನರವಾಣೆ, “ಒಬ್ಬ ಸೈನಿಕನಾಗಿ, ಆದೇಶ ನೀಡಿದರೆ ಯುದ್ಧಕ್ಕೆ ಹೋಗುತ್ತೇನೆ, ಆದರೆ ಯುದ್ಧವು ರೋಮ್ಯಾಂಟಿಕ್ ಅಲ್ಲ. ಅದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಅದು ತುಂಬಾ ಗಂಭೀರವಾದ ವ್ಯವಹಾರ. ಅವಿವೇಕದ ಜನರು ಯುದ್ಧವನ್ನು ನಮ್ಮ ಮೇಲೆ ಬಲವಂತವಾಗಿ ಹೇರಿದರು, ನಾವು ಅದಕ್ಕೆ ಉತ್ಸುಕರಾಗಬಾದರು ಎಂದು ಹೇಳಿದರು.

ಇದನ್ನೂ ಓದಿ :ಮೋದಿ ಬದಲು ಟ್ರಂಪ್​ ವಿಶ್ವಗುರು ಆಗಿದ್ದಾರೆ, ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ: ಹರಿಪ್ರಸಾದ್​

ಮುಂದುವರಿದು ಮಾತನಾಡಿದ ಮನೋಜ್ ನರವಾಣೆ “ಯುದ್ದದಿಂದ ಗಡಿಗಳಲ್ಲಿ ವಾಸಿಸುವ ನಾಗರಿಕರು, ವಿಶೇಷವಾಗಿ ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಹಾನಿ ಉಂಟಾಗುತ್ತದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು ಮುಂದಿನ ಪೀಳಿಗೆಗೂ ಮುಂದುವರಿಯುತ್ತದೆ. ಭೀಕರ ದೃಷ್ಯಗಳನ್ನು ನೋಡಿದ ಜನರು ಅದರಿಂದ ಹೊರ ಬರಲು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

ಇದನ್ನೂ ಓದಿ :ಯುದ್ದದ ಕಾರ್ಮೋಡ; ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಯುದ್ದಭೂಮಿಗೆ ವಾಪಸ್​

ಅಗತ್ಯವಿದ್ದರೆ ಹೋರಾಡಲು ಸಿದ್ದರಾಗಿರಬೇಕು, ಆದರೆ ಶಾಂತಿಯುತ ಮಾತುಕತೆ ಮೊದಲ ಆಧ್ಯತೆಯಾಗಿರಬೇಕು. ನಾವು ಯುದ್ದಕ್ಕೆ ಹೋಗುವುದು ಮೊದಲ ಆಯ್ಕೆಯಾಗಿರುವುದಿಲ್ಲ. ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ದೇಶಗಳ ನಡುವೆ ಮಾತ್ರವಲ್ಲದೆ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಮ್ಮೊಳಗೆ ಪರಿಹರಿಸಿಕೊಳ್ಳಲು ನಾವು ಪ್ರಯತ್ನಿಸಬೇಕು. ಹಿಂಸಾಚಾರವು ಉತ್ತರವಲ್ಲ” ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments