ವಿಜಯಪುರ : ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟಿರುವ ಕದನ ವಿರಾಮದ ಕುರಿತು ಮಾತನಾಡಿದ ಯತ್ನಾಳ್ “ಯುದ್ದ ವಿರಾಮ ಅಂತ ಘೋಷಣೆ ಮಾಡಿದಾಗ ಬಹಳ ದೇಶ ಭಕ್ತರಿಗೆ ಬೇಸರವಾಗಿದೆ, ಹಿಂದೆ ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಮಾಡಬಾರದು ಎಂದು ಹೇಳಿದರು.
ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್ ” ಕದನ ವಿರಾಮದ ಮಾತುಕತೆಯಲ್ಲಿ ಪಿಓಕೆ ಬಿಟ್ಟುಕೊಡೋದು, ಸಿಂಧು ನದಿ ನೀರನ್ನ ನಾವೇ ಬಳಸಿಕೊಳ್ಳೋದು ಸೇರಿದಂತೆ ಮೋದಿ ಅವರು ಹಾಕಿದ ಕಂಡಿಷನ್ ಉತ್ತಮವಾಗಿವೆ. ಆದರೆ ಯುದ್ಧ ವಿರಾಮ ಅಂತಾ ಘೋಷಣೆ ಮಾಡಿದಾಗ ಬಹಳ ದೇಶ ಭಕ್ತರಿಗೆ ಬೇಸರ, ನೋವಾಗಿತ್ತು. ಹಿಂದೆ ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಅವರು ಮಾಡಬಾರದು ಅನ್ನೋದು ಈ ದೇಶದ ಜನರ ಭಾವನೆ ಎಂದು ಹೇಳಿದರು. ಇದನ್ನೂ ಓದಿ :ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ: ಕೊಡ್ತಾರಾ ಖಡಕ್ ಸಂದೇಶ..?
ಮುಂದುವರಿದು ಮಾತನಾಡಿದ ಯತ್ನಾಳ್ ” ಚೀನಾ ಮತ್ತು ಪಾಕಿಸ್ತಾನ ಭರವಸೆಗೆ ಅರ್ಹರಲ್ಲ. ಶಿಮ್ಲಾ ಒಪ್ಪಂದವನ್ನ ಪಾಕಿಸ್ತಾನ ತಾನೇ ಮಾಡಿಕೊಂಡಿದೆ. ಇಂದಿರಾಗಾಂಧಿ ಮಾಡಿದ ತಪ್ಪನಿಂದ ಲಾಹೋರ್ ನಮ್ಮ ದೇಶದ ಭಾಗ ಆಗೋದು ತಪ್ಪಿದಂತಾಯಿತು. ದೇಶದ ಜನರು ಮೋದಿ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ.
ನಾವು ಅಂಜಬಾರದು, ನಮ್ಮ ಹತ್ತಿರ ಕೂಡ ಅಣು ಬಾಂಬ್ ಇದೆ. ಕೇವಲ ನಮ್ಮ ಒಂದೇ ಬ್ರಹ್ಮೋಸ್ ಸಾಕು ಪಾಕಿಸ್ತಾನ ನಾಶ ಮಾಡಲು.
ಇದನ್ನೂ ಓದಿ :ದೇಶ ಕಾಯುವ ಯೋಧರಿಗೆ ಆಸ್ತಿ ತೆರಿಗೆ ವಿನಾಯಿತಿ: ಮಹತ್ವದ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ
ಆದರೆ ಪ್ರಧಾನಮಂತ್ರಿಗಳು ಈ ಭಾರಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಇದೆ ರೀತಿ ಇದ್ರೆ ಪ್ರಧಾನಿಗಳ ಮೇಲೆ ವಿಶ್ವಾಸ ಉಳಿಯುತ್ತೆ. ಒಂದು ಹೆಜ್ಜೆ ಹಿಂದೆ ಸರಿದರೆ ಸರಿಯಾಗಲ್ಲ. ಹಿಂದೂಗಳು ಬಿಜೆಪಿಗೆ ಓಟು ಏಕೆ ಹಾಕುತ್ತೇವೆ
ನೀವು ಹಿಂದೂಗಳ ರಕ್ಷಣೆ ಮಾಡ್ತಿರಿ ಅಂತಾ. ಆದ್ರೆ ನೀವು ಹಿಂದೆ ಸರಿದರೆ ಜನರು ಒಪ್ಪಲ್ಲ. ನರೇಂದ್ರ ಮೋದಿ ಅವರ ಬಗ್ಗೆ ವಿಶ್ವಾಸವಿದೆ. ಅವರು ಯಾವ ಕಾಲಕ್ಕು ಹಿಂದೆ ಸರಿಯಲ್ಲ ಅಂತಾ ವಿಶ್ವಾಸ ಇದೆ. ದೇಶದ ಜನ ಒಂದು ಬಾರಿ ಪಾಕಿಸ್ತಾನ ನಾಶ ಆಗೋದನ್ನ ನೋಡಬೇಕಿದೆ ಎಂದು ಯತ್ನಾಳ್ ಹೇಳಿದರು.