ತಮಿಳಿನ ಖ್ಯಾತ ನಟ ವಿಶಾಲ್ ಕಾರ್ಯಕ್ರಮವೊಂದರಲ್ಲಿ ತೀವ್ರ ಅಸ್ವಸ್ಥರಾಗಿದ್ದು. ವೇದಿಕೆ ಮೇಲೆಯೇ ವಿಶಾಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಕುರಿತಾದ ವಿಡಿಯೋ ಮತ್ತು ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ನಟ ಅಭಿಮಾನಿಗಳಲ್ಲಿ ಇವು ಸಾಕಷ್ಟು ಆತಂಕ ಮೂಡಿಸಿವೆ.
ತಮಿಳುನಾಡಿನ, ವಿಲ್ಲುಪುರಂ ಜಿಲ್ಲೆಯ, ಕೂವಾಗಮ್‌ನಲ್ಲಿರುವ ಕೂತಾಂಡವರ್ ದೇವಸ್ಥಾನದಲ್ಲಿ ಭಾನುವಾರ (ಮೇ 11) ತೃತೀಯಲಿಂಗಿಗಳ ಸೌಂದರ್ಯ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ವಿಶಾಲ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ವೇದಿಕೆ ಮೇಲೆ ನಿಂತು ಮಾತನಾಡುವಾಗ ವಿಶಾಲ್ ಅಸ್ವಸ್ಥರಾಗಿದ್ದು. ವೇದಿಕೆಯ ಮೇಲೆ ಮೂರ್ಚೆ ಹೋಗಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದವರು ಆತಂಕಕ್ಕೆ ಒಳಗಾಗಿದ್ದು. ನಟನಿಗೆ ಏನಿಗಿದೆ ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ :ನಟ ರಾಕೇಶ್ ಪೂಜಾರಿ ನಿಧನ: ‘ಮಿಸ್ ಯೂ ಮಗನೆ’ ಎಂದು ಭಾವುಕ ಪೋಸ್ಟ್ ಹಾಕಿ ರಕ್ಷಿತಾ ಸಂತಾಪ
ನಂತರ ವಿಶಾಲ್ ಅವರಿಗೆ ವೇದಿಕೆ ಮೇಲೆಯೆ ಪ್ರತಮ ಚಿಕಿತ್ಸೆ ನೀಡಿದ್ದು. ನಂತರ ಚೇತರಿಸಿಕೊಂಡ ನಟ ಕಣ್ಣು ತೆರೆದರು, ನಂತರ ಅವರನ್ನು ವೇದಿಕೆ ಮೇಲೆಯೆ ಇದ್ದ ಮಾಜಿ ಸಚಿವ ಪೊನ್ಮುಡಿ ಅವರು ಆಸ್ಪತ್ರೆಗೆ ಕರೆದೊಯ್ದರು. ಇದೀಗ ನಟ ವಿಶಾಲ್ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನಿಯರನ್ನ ಕೇಳಿದ್ರೆ ಬ್ರಹ್ಮೋಸ್ ಕ್ಷಿಪಣಿ ತಾಕತ್ತು ತಿಳಿಯುತ್ತದೆ: ಯೋಗಿ ಆದಿತ್ಯನಾಥ್
ನಟ ವಿಶಾಲ್ ಅವರ ಮ್ಯಾನೇಜರ್ ಹರಿ ಮಾತನಾಡಿ, ‘ಭಾನುವಾರ ಮಧ್ಯಾಹ್ನ ವಿಶಾಲ್ ಏನನ್ನೂ ತಿಂದಿರಲಿಲ್ಲ. ಕೇವಲ ಜ್ಯೂಸ್ ಮಾತ್ರ ಕುಡಿದಿದ್ದರು. ಇದರಿಂದಾಗಿ ಅವರು ಪ್ರಜ್ಞೆ ಕಳೆದುಕೊಂಡರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ವಿಶಾಲ್ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ನಿಲ್ಲಿಸದಂತೆ ಸಲಹೆ ನೀಡಿದ್ದಾರೆ’ ಎಂದಿದ್ದಾರೆ.