ಗದಗ : ದೇವರ ಪೂಜೆಗೆ ಹೂಗಳನ್ನು ತರಲು ಹೋಗಿದ್ದ ಮಹಿಳೆ ಬೀದಿ ನಾಯಿ ದಾಳಿಗೆ ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 53 ವರ್ಷದ ಪ್ರೇಮವ್ವ ಶರಣಪ್ಪ ಚೋಳಿನ್ ಎಂದು ಗುರುತಿಸಲಾಗಿದೆ.
ಗದಗ ಜಿಲ್ಲೆಯ, ಗಜೇಂದ್ರಗಡ ಪಟ್ಟಣದ ಚೋಳಿನ್ ಓಣಿಯಲ್ಲಿ ಘಟನೆ ನಡೆದಿದ್ದು. ಮೃತ ಮಹಿಳೆ ಪ್ರೇಮವ್ವ ಶರಣಪ್ಪ ಚೋಳಿನ್ ಅವರು ದೇವರ ಪೂಜೆಗೆ ಹೂಗಳನ್ನ ತರಲು ಎಂದು ಹೋಗುತ್ತಿದ್ದರು. ಈ ವೇಳೆ ಬೀದಿ ನಾಯಿಯೊಂದು ಮಹಿಳೆ ಮೇಲೆ ಏಕಾಏಕಿ ದಾಳಿ ನಡೆಸಿದ್ದು. ಮಹಿಳೆ ಕೈ-ಕಾಲು ಸೇರಿದಂತೆ ದೇಹದ ಹಲವು ಭಾಗಗಳನ್ನು ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ಕೂಡಲೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರು ಮಹಿಳೆ ಚಿಕಿತ್ಸೆ ಫಲಸದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ವೇದಿಕೆ ಮೇಲೆಯೆ ಮೂರ್ಚೆ ತಪ್ಪಿದ ನಟ ವಿಶಾಲ್: ಫ್ಯಾನ್ಸ್ಗಳಿಗೆ ಆತಂಕ
ಮಹಿಳೆ ಪ್ರೇಮವ್ವ ಶರಣಪ್ಪ ಚೋಳಿನ್ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು. ಗಜೇಂದ್ರಗಡ ತಾಲೂಕ ಆಸ್ಪತ್ರೆ ಬಳಿ ಮೃತ ಮಹಿಳೆ ಶವವನ್ನು ಇಟ್ಟು ಬೀದಿ ನಾಯಿಗಳನ್ನು ಸೆರೆ ಹಿಡಿಯಿರೆಂದು ಸ್ಥಳೀಯರ ಒತ್ತಾಯಿಸಿದ್ದಾರೆ. ಪುರಸಭೆ ಅಧಿಕಾರಿಗಳು, ತಹಶಿಲ್ದಾರರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದು ಗಜೇಂದ್ರಗಡ ಪೊಲೀಸರು ಪರಸ್ಥಿತಿ ತಿಳಿಗೊಳಿಸಿದ್ದಾರೆ ಇನ್ನು ಗಜೇಂದ್ರಗಡ ಪೊಲೀಸ ಠಾಣೆಯಲ್ಲಿ ಘಟನಾ ಸಂಬಂಧ ಪ್ರಕರಣ ದಾಖಲಾಗಿದೆ.