Monday, May 12, 2025

“ರಾಕಿ ಭಾಯ್​ ನಿಯಂತ್ರಿಸಲಾಗದ ಶಕ್ತಿ”: KGF ಚಾಪ್ಟರ್​ 3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ

ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷ ಕಳೆದಿದೆ, ಇದೀಗ ಹೊಂಬಾಳೆ ಫಿಲ್ಮ್ಸ್‌ ಕೆಜಿಎಫ್​ 3ನೇ ಭಾಗದ ಬಗ್ಗೆ ದೊಡ್ಡ ಸುಳಿವನ್ನ ಬಿಟ್ಟು ಕೊಟ್ಟಿದ್ದು. ಇದಕ್ಕೆ ಸಂಬಂಧಿಸಿದ ಎಐ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಂನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಕ್ಯಾಪ್ಶನ್​ನಲ್ಲಿ ‘ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲೀಷ್​ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಹವಾ ಸೃಷ್ಟಿಸಿದ್ದ ಕೆಜಿಎಫ್​ ಚಾಪ್ಟರ್​- 2 ಸಿನಿಮಾದ ನಂತರ ಹೊಂಬಾಳೆ ಸಂಸ್ಥೆ ಮತ್ತು ನಿರ್ದೇಶಕ ಪ್ರಶಾಂತ್​ ನೀಲ್​ ಅಲ್ಲಲ್ಲಿ ಕೆಜಿಎಫ್​ ಮೂರನೇ ಭಾಗದ ಬಗ್ಗೆ ಹಿಂಟ್​ ನೀಡುತ್ತಿದ್ದರು. ಆದರೆ ಸಿನಿಮಾದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಇದೀಗ ಹೊಂಬಾಳೆ ಸಂಸ್ಥೆ ಕೆಜಿಎಫ್​ ಚಾಪ್ಟರ್​ 3 ಬಗ್ಗೆ ಮತ್ತೊಂದು ಸುಳಿವು ನೀಡಿದೆ. ಆದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದು, ʻಕೆಜಿಎಫ್ 3ʼ ಸಿನಿಮಾ ಯಾವಾಗ ಶುರುವಾಗಬಹುದು ಎಂದು ಫ್ಯಾನ್ಸ್​ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೂ ಓದಿ :ಪಾಕ್​ ವಾಯುದಾಳಿ: ಸೇನಾ ವೈದ್ಯಕೀಯ ಸಿಬ್ಬಂದಿ ಹುತಾತ್ಮ

ಹೊಂಬಾಳೆ ಸಂಸ್ಥೆ ಕೊಟ್ಟ ಹಿಂಟ್​ ಏನು..?

ಹೊಂಬಾಳೆ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಎಐ ವಿಡಿಯೋ ಹಂಚಿಕೊಂಡಿದ್ದು ‘ನರಾಚಿʼ ದ್ವಾರದಿಂದ ಆರಂಭವಾಗುವ ಈ ವಿಡಿಯೋ ಕೆಜಿಎಫ್‌-2ನಲ್ಲಿ ರಾಕಿ ಭಾಯ್‌ ಹಡಗಿನ ಪೂರ್ತಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ. ಕೆಜಿಎಫ್‌ ಚಾಪ್ಟರ್‌-1ನಲ್ಲಿ ಯಶ್‌ ನರಾಚಿಗೆ ಎಂಟ್ರಿಕೊಟ್ಟಾಗಿನಿಂದ ಇಡೀ ಕೆಜಿಎಫ್‌ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋನಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ವಿಡಿಯೋ ಕೆಳಗೆ ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ :ಭಾರತದ ದಾಳಿಗೆ ಹೆದರಿ ಅಮೆರಿಕಾ ಬಳಿ ಅಂಗಲಾಚಿದ ಪಾಕಿಸ್ತಾನ ವಿದೇಶಾಂಗ ಸಚಿವ..!

ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ರಿಲೀಸ್‌ ಆಗ್ತಿದ್ದಂತೆ ಯಶ್‌ ಅಭಿಮಾನಿಗಳು ಸಖತ್‌ ಖುಷಿಯಲ್ಲಿದ್ದಾರೆ, ಕೆಜಿಎಫ್‌-3 ಯಾವಾಗ ಬರುತ್ತೆ? ಯಶ್‌ ಅವ್ರನ್ನ ಯಾವಾಗ ರಾಖಿಭಾಯ್‌ ಅವತಾರದಲ್ಲಿ ನೋಡ್ತೀವಿ ಅಂತೆಲ್ಲ ಕಾಮೆಂಟ್‌ನಲ್ಲಿ ಪ್ರಶ್ನೆ ಕೇಳ್ತಿದ್ದಾರೆ.

ಆದರೆ ಸದ್ಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಜೂ. ಎನ್‌ಟಿಆರ್‌ ಜೊತೆಗಿನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದರ ಬಳಿಕ ಅವರು ‘ಸಲಾರ್‌ 2’ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 2026ರಲ್ಲಿ ಸಲಾರ್ ಚಿತ್ರೀಕರಣ ಶುರುವಾದರೆ 2027ಕ್ಕೆ ಸಿನಿಮಾ ರಿಲೀಸ್‌ ಆಗಬಹುದು. ಆದ್ದರಿಂದ ‘ಕೆಜಿಎಫ್‌ 3’ ಚಿತ್ರ 2027 ಅಥವಾ 2028ರ ನಂತರ ಬರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿತ್ರದ ಮುಹೂರ್ತ ಯಾವಾಗಾ? ಶೂಟಿಂಗ್‌ ಎಷ್ಟು ವರ್ಷ ನಡೆಯುತ್ತೆ? ಯಾವಾಗ ಚಿತ್ರ ತೆರೆಗೆ ಬರಲಿದೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ…..

RELATED ARTICLES

Related Articles

TRENDING ARTICLES