ಜೈಪುರ: ಭಾರತೀಯ ವಾಯುಪಡೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಜುನ್ಜುನು ನಿವಾಸಿ ಸುರೇಂದ್ರ ಕುಮಾರ್, ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಶನಿವಾರ ಮುಂಜಾನೆ ಪಾಕಿಸ್ತಾನದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಸುರೇಂದ್ರ ಕುಮಾರ್ ಕಳೆದ 14 ವರ್ಷಗಳಿಂದ ಭಾರತೀಯ ವಾಯುಪಡೆಯ ವೈದ್ಯಕೀಯ ವಿಭಾಗದಲ್ಲಿ ಉದಮ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಮನೆಗೆ ತೆರಳಿದ್ದ ಸುರೇಂದ್ರ ಕುಮಾರ್ ಕಳೆದ ಏಪ್ರೀಲ್ 15ರಂದು ಕರ್ತವ್ಯಕ್ಕೆ ತೆರಳಿದ್ದರು. ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ನೂತನ ಮನೆಯ ಗೃಹಪ್ರವೇಶ ಮಾಡಿದ್ದ ಸುರೇಂದ್ರ ಕುಮಾರ್ ಇಂದು ಪಾಕಿಸ್ತಾನ ನಡೆಸಿದ ವಾಯು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ :ಯುದ್ಧದ ಮುನ್ಸೂಚನೆ: ರೈಲು, ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ
ಇನ್ನು ಹುತಾತ್ಮ ಸುರೇಂದ್ರ ಕುಮಾರ್ ತಮ್ಮ ಪತ್ನಿ ಸೀಮಾ ಮತ್ತು ಇಬ್ಬರು ಮಕ್ಕಳನ್ನ ಅಗಲಿಸಿದ್ದು, ಇವರ ತಂದೆ ಶಿಶುಪಾಲ್ ಸಿಂಗ್ ಕೂಡ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸಿ ಕೆಲ ತಿಂಗಳ ಹಿಂದೆಯಷ್ಟೆ ಮೃತಪಟ್ಟಿದ್ದರು. ಇನ್ನು ಪತಿಯ ಸಾವಿನ ವಿಷಯವನ್ನು ತಿಳಿದ ಪತ್ನಿ ಸೀಮಾ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಕಲೆಕ್ಟರ್ ರಾಮ್ ಅವತಾರ್ ಮೀನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸೀಮಾ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.
ಇದನ್ನೂ ಓದಿ :ಪಾಕ್ನಿಂದ ಶೆಲ್ ದಾಳಿ: ಜಮ್ಮುವಿನ ಹಿರಿಯ ಅಧಿಕಾರಿ ಸೇರಿದಂತೆ, ಇಬ್ಬರು ನಾಗರಿಕರು ಸಾ*ವು
ಸುರೇಂದ್ರ ಕುಮಾರ್ ಅವರ ಸಾವನ್ನ ಸೇನಾ ಪ್ರಧಾನ ಕಛೇರಿ ದೃಡಪಡಿಸಿದ್ದು. ಈ ವಿಷಯವನ್ನು ಸೋದರ ಮಾವ ಜೈ ಪ್ರಕಾಶ್ ಅವರಿಗೆ ಪೋನ್ ಮೂಲಕ ತಿಳಿಸಿದ್ದಾರೆ. ಸುರೇಂದ್ರ ಕುಮಾರ್ ಅವರ ತ್ಯಾಗವು ರಾಷ್ಟ್ರದ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೈರ್ಯಶಾಲಿ ಪರಂಪರೆಗೆ ಅವರು ಸೇರ್ಪಡೆಯಾಗಿದ್ದಾರೆ. ಅವರ ಮರಣವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ಸ್ಮರಿಸಲಾಗುತ್ತದೆ ಎಂದು ಸ್ಥಳೀಯರೊಬ್ಬರು ಖಾಸಗಿ ಸುದ್ದಿ ಮಾಧ್ಯಮಕ್ಕೆ ಹೇಳಿದ್ದಾರೆ.