Monday, May 12, 2025

ಏಕಾಂತದಲ್ಲಿ ಧ್ಯಾನ ಮಾಡುವ ಹವ್ಯಾಸ: ಕಾವೇರಿ ನದಿಗೆ ಬಿದ್ದು ಪದ್ಮಶ್ರೀ ವಿಜೇತ ವಿಜ್ಞಾನಿ ಸಾ*ವು

ಮಂಡ್ಯ: ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢವಾಗಿ ಸಾವನ್ನಪ್ಪಿದ್ದರ ಕುರಿತು ಮಾಹಿತಿ ದೊರೆತಿದ್ದು. ಕಾವೇರಿ ನದಿ ತೀರದಲ್ಲಿ ಜ್ಞಾನ ಮಾಡಲು ಹೋಗಿದ್ದ ಸುಬಣ್ಣ ಅಯ್ಯಪ್ಪನ್ ಅವರು ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಶ್ರೀ ರಂಗಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ಬಣ್ಣ ಅಯ್ಯಪ್ಪನ್​ ಅವರು ಮೈಸೂರಿನ ಅಪಾರ್ಟ್‍ಮೆಂಟ್ ಒಂದರಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಮೇ 7ರಂದು ಮನೆಯಿಂದ ನಾಪತ್ತೆಯಾಗಿದ್ದ ಸುಬ್ಬಣ್ಣ ಅಯ್ಯಪ್ಪನ್ ನಿನ್ನೆ (ಮೇ.10) ಸಂಜೆ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಪರಿಚಿತ ಶವದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವಿಜ್ಞಾನಿಯ ಗುರುತು ಪತ್ತೆಯಾಗಿತ್ತು. ನದಿ ದಡದಲ್ಲಿ ಇವರ ಸ್ಕೂಟರ್​ ಕೂಡ ಪತ್ತೆಯಾಗಿತ್ತು. ಇದನ್ನೂ ಓದಿ :ಕದನ ವಿರಾಮ: ವಿಶೇಷ ಅಧಿವೇಶನ ಕರೆಯುವಂತೆ ಮೋದಿಗೆ ಪತ್ರ ಬರೆದ ರಾಹುಲ್​ ಗಾಂಧಿ

ಇದೀಗ ಇವರ ಸಾವಿನ ರಹಸ್ಯ ಬಯಲಾಗಿದ್ದು. ಡಾ.ಸುಬ್ಬಣ್ಣ ಅಯ್ಯಪ್ಪನ್ ಅವರು ಏಕಾಂತದಲ್ಲಿ ಧ್ಯಾನ ಮಾಡುವ ಹವ್ಯಾಸ ಹೊಂದಿದ್ದರು. ಆಗಾಗ್ಗೆ ಒಬ್ಬರೇ ಮೆಡಿಟೇಶನ್ ಮಾಡಲು ಹಲವು ಸ್ಥಳಗಳಿಗೆ ಹೋಗ್ತಿದ್ದ ಸುಬ್ಬಣ್ಣ ಅಯ್ಯಪ್ಪನ್ ಮೇ.07 ರಂದು ಮನೆಯಿಂದ ಧ್ಯಾನ ಮಾಡಲು ಎಂದು ಶ್ರೀ ರಂಗಪಟ್ಟಣ ಬಳಿಯ ಕಾವೇರಿ ನದಿಗೆ ಹೋಗಿದ್ದರು.

ಇದನ್ನೂ ಓದಿ :ಭಾರತೀಯ ಸೇನಾ ಪಡೆಗಳ ಘರ್ಜನೆ ರಾವಲ್ಪಿಂಡಿಯವರೆಗೂ ತಲುಪಿದೆ; ರಾಜನಾಥ್​ ಸಿಂಗ್​

ಧ್ಯಾನ ಮಾಡುವಾಗ ನದಿಯಲ್ಲಿ ಕಾಲು ಜಾರಿ ಬಿದ್ದು ಸುಬ್ಬಣ್ಣ ಅಯ್ಯಪ್ಪನ್​ ಅವರು ಸಾವನ್ನಪ್ಪಿದ್ದು. ನದಿ ತೀರದಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಘಟನೆ ಘಟಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಘಟನೆ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES