Monday, May 12, 2025

“ಆಪರೇಷನ್​ ಸಿಂಧೂರ” ಕಾರ್ಯಚರಣೆ ಮುಗಿದಿಲ್ಲ: ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ವಾಯುಪಡೆ

ದೆಹಲಿ : ಆಪರೇಷನ್​ ಸಿಂಧೂರ್​ ಯಶಸ್ವಿ ಕಾರ್ಯಚರಣೆಯ ಬಗ್ಗೆ ಭಾರತೀಯ ವಾಯುಸೇನೆ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು. “ಆಪರೇಷನ್​ ಸಿಂಧೂರ ಕಾರ್ಯಚರಣೆ ಇನ್ನು ನಿಂತಿಲ್ಲ, ಇದು ಮುಂದುವರಿದಿದೆ ಎಂದು ಟ್ವಿಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್​ ಸಿಂಧೂರ್​ ಕಾರ್ಯಚರಣೆ ನಡೆಸಿ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಕಾರ್ಯಚರಣೆ ನಂತರ ಪಾಕಿಸ್ತಾನ ಭಾರತದ ಮೇಲೆ ಸರಣಿ ಡ್ರೋನ್​ ದಾಳಿ ನಡೆಸುತ್ತಿದ್ದು. ಇದಕ್ಕೆ ಪ್ರತಿಯಾಗಿ ಭಾರತವೂ ಪ್ರಮಾಣಕ್ಕನುಗುಣವಾಗಿ ದಾಳಿ ನಡೆಸುತ್ತಿದೆ. ಆದರೆ ನಿನ್ನೆ ಇದ್ದಕ್ಕಿಂದತೆ ಕದನ ವಿರಾಮ ಘೋಷಣೆಯಾಗಿದ್ದು. ಇದರ ಬೆನ್ನಲ್ಲೇ ಭಾರತೀಯ ವಾಯುಪಡೆ ಮಾಡಿರುವ ಟ್ವಿಟ್​ ಕುತೂಹಲ ಉಂಟುಮಾಡಿದೆ. ಇದನ್ನೂ ಓದಿ :ಪುಲ್ವಾಮ ದಾಳಿಯನ್ನ ಒಪ್ಪಿಕೊಂಡ ಪಾಕ್​ ಸೇನೆ: ಯುದ್ದತಂತ್ರವೆಂದ ಪಾಕಿಗಳು

ಏನಿದೆ ಟ್ವಿಟ್​ನಲ್ಲಿ..!

ಆಪರೇಷನ್​ ಸಿಂಧೂರ್ ಕಾರ್ಯಚರಣೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಟ್ವಿಟ್​ ಮಾಡಿರುವ ಭಾರತೀಯ ವಾಯುಸೇನೆ “ಭಾರತೀಯ ವಾಯುಪಡೆ (IAF) ಆಪರೇಷನ್ ಸಿಂಧೂರ್‌ ಅಡಿಯಲ್ಲಿ ನಿಯೋಜಿಸಿದ್ದ ಎಲ್ಲಾ ಕಾರ್ಯಗಳನ್ನು ನಿಖರವಾಗಿ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಈ ಎಲ್ಲಾ ಕಾರ್ಯಚರಣೆಗಳು ಉದ್ದೇಶಪೂರ್ವಕವಾಗಿ ಮತ್ತು ವಿವೇಚನೆಯಿಂದ ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಮಾಡಿ ಮುಗಿಸಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ :ಜಾತ್ರೆಗೆಂದು ಬಂದಿದ್ದ 16 ಜನ ಯೋಧರು ಸೇವೆಗೆ ವಾಪಾಸ್​: ಸನ್ಮಾನ ಮಾಡಿ ಬೀಳ್ಕೊಟ್ಟ ಗ್ರಾಮಸ್ಥರು

ಆಪರೇಷನ್​ ಕಾರ್ಯಚರಣೆ ಇನ್ನು ಮುಗಿದಿಲ್ಲ ಎಂದು ಹೇಳಿರುವ ವಾಯುಪಡೆ. ಕಾರ್ಯಚರಣೆ ಇನ್ನು ನಡೆಯುತ್ತಿದೆ. ಈ ಕುರಿತು ಸರಿಯಾದ ಸಮಯದಲ್ಲಿ ವಿವರಣೆ ನೀಡಲಾಗುತ್ತದೆ. ಆದ್ದರಿಂದ ಯಾರೂ ಕೂಡ ಪರಿಶೀಲಿಸದೆ. ಊಹಾಪೋಹದ ಮಾಹಿತಿಯನ್ನ ಹಂಚಿಕೊಳ್ಳಬೇಡಿ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡದೆ.

RELATED ARTICLES

Related Articles

TRENDING ARTICLES