Monday, May 12, 2025

ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್​ ಒತ್ತಾಯ: ಕದನ ವಿರಾಮದ ಬಗ್ಗೆ ಚರ್ಚೆ

ದೆಹಲಿ: ಭಾರತ ಆಪರೇಷನ್​ ಸಿಂಧೂರ ಕಾರ್ಯಚರಣೆ ನಡೆಸಿದ ನಂತರ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚಾಗಿದ್ದು. ನಿನ್ನೆ ಸಂಜೆ 5ಗಂಟೆಯಿಂದ ಎರಡು ಸೇನೆಗಳು ಕದನ ವಿರಾಮ ಘೋಷಸಿಕೊಂಡಿವೆ. ಆದರೆ ಕದನ ವಿರಾಮದ ನಡುವೆಯು ಪಾಕಿಸ್ತಾನ ಭಾರತದ ಮೇಲೆ ಡ್ರೋನ್​ ಮತ್ತು ಪ್ರೋಜಕ್ಟೈಲ್​ಗಳನ್ನ ಬಳಸಿಕೊಂಡು ನಿನ್ನೆ ರಾತ್ರಿ ದಾಳಿ ನಡೆಸಿದ್ದು. ಇದರ ನಡುವೆ ಕಾಂಗ್ರೆಸ್​ ಪಕ್ಷ ಮೋದಿ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿ, ಆಪರೇಷನ್‌ ಸಿಂಧೂರ, ಭಾರತ ಮತ್ತು ಪಾಕ್‌ ನಡುವಿನ ಕದನ ವಿರಾಮ ಕುರಿತು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು. ಜೊತೆಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್‌ ಆಗ್ರಹಿಸಿದೆ. ಈ ಕುರಿತು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ತಮ್ಮ ಎಕ್ಷ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ :“ರಾಕಿ ಭಾಯ್​ ನಿಯಂತ್ರಿಸಲಾಗದ ಶಕ್ತಿ”: KGF ಚಾಪ್ಟರ್​ 3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ

ಅಷ್ಟೇ ಅಲ್ಲದೇ ಭಾರತ ಮತ್ತು ಪಾಕಿಸ್ತಾನ ತಟಸ್ಥ ವೇದಿಕೆಯಲ್ಲಿ ಮಾತುಕತೆ ನಡೆಸುತ್ತವೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಸ್ತಾಪಿಸಿದ್ದು. ಇದು ಹಲವಾರು ಪ್ರಶ್ನೆಗಳನ್ನ ಹುಟ್ಟಹಾಕಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆಗೆ ಮೂರನೇಯವರಿಗೆ ಆಹ್ವಾನ ಕೊಟ್ಟಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ ಎಂದು ಜೈರಾಮ್​ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತದೆಯೇ..? ನಾವು ಪಾಕಿಸ್ತಾನದ ಜೊತೆ ಯಾವ ಬದ್ದತೆ ಹೊಂದಿದ್ದೇವೆ. ಇದರಿಂದ ನಮಗೆ ಏನು ಸಿಕ್ಕಿದೆ. ಇಡೀ ಪರಿಸ್ಥಿತಿಯ ಕುರಿತು ಇಬ್ಬರು ದೇಶದ ಮಾಜಿ ಸೇನ ಮುಖ್ಯಸ್ಥರು ನೀಡಿದ ಹೇಳಿಕೆಗಳ ಬಗ್ಗೆ ಕಾಂಗ್ರೆಸ್​ ಗಮನ ಸೆಳೆಯಲು ಬಯಸುತ್ತದೆ, ಇವೆಲ್ಲದರ ಕುರಿತು ಪ್ರಧಾನ ಮಂತ್ರಿಗಳು ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ.

ಇದನ್ನೂ ಓದಿ:ಪಾಕ್​ ವಾಯುದಾಳಿ: ಸೇನಾ ವೈದ್ಯಕೀಯ ಸಿಬ್ಬಂದಿ ಹುತಾತ್ಮ

ಕೊನೆಯಲ್ಲಿ 1971ರಲ್ಲಿ ಇಂದಿರಾಗಾಂಧಿ ಅವರು ಪಾಕ್​ ವಿರುದ್ದ ತೆಗೆದುಕೊಂಡ ಕ್ರಮದ ಕುರಿತು ಜೈರಾಮ್​ ರಮೇಶ್​ ಬರೆದುಕೊಂಡಿದ್ದು. ಇಂದಿರಾ ಗಾಂಧಿಯವರು ಪ್ರದರ್ಶಿಸಿದ ಅಸಾಧಾರಣ ದಿಟ್ಟ ಮತ್ತು ದೃಢನಿಶ್ಚಯದ ನಾಯಕತ್ವವನ್ನು ದೇಶವು ನೆನಪಿಸಿಕೊಳ್ಳುವುದು ಸ್ವಾಭಾವಿಕ ಎಂದು ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ ಎಂದು ಎಕ್ಸ್‌ನಲ್ಲಿ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

 

 

RELATED ARTICLES

Related Articles

TRENDING ARTICLES