ವಿಜಯಪುರ : ಊರ ದೇವರ ಜಾತ್ರೆಗೆಂದು ರಜೆ ಮೇಲೆ ಊರಿಗೆ ಬಂದಿದ್ದ 16 ಯೋಧರು ತುರ್ತು ಸಂಧರ್ಬದ ಪರಿಸ್ಥಿತಿ ಎದುರಿಸಲು ಸೇವೆಗೆ ಮರಳಿದ್ದು. ಗಡಿಗೆ ತೆರಳುತ್ತಿದ್ದ ಯೋಧರಿಗೆ ಗ್ರಾಮಸ್ಥರು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಹುಲ್ಲುರು ತಾಂಡಾದ 16 ಯೋಧರು ಜಾತ್ರೆಗೆ ಎಂದು ಸ್ವಗ್ರಾಮಕ್ಕೆ ಮರಳಿದ್ದರು. BSF, CRPF, ಪ್ಯಾರಾ ಮಿಲಿಟರಿ, ARMYಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರು ಗ್ರಾಮದ ಮಾರುತೇಶ್ವರ ಜಾತ್ರೆಗಾಗಿ 30 ದಿನಗಳ ಕಾಲ ರಜೆ ಪಡೆದು ಗ್ರಾಮಕ್ಕ ಮರಳಿದ್ದರು. ಆದರೆ ಗಡಿಯಲ್ಲಿ ಯುದ್ದದ ಕಾರ್ಮೋಡ ಆವರಿಸಿರುವ ಕಾರಣ ಇವೆರನೆಲ್ಲಾ ಸೇನೆ ವಾಪಸ್ ಬರುವಂತ ತುರ್ತು ಸೂಚನೆ ನೀಡಿದ್ದು. ಈ ಸೂಚನೆ ಅನ್ವಯ ಯೋಧರು ತಮ್ಮ ಸೇವೆಗೆ ಮರಳಿದ್ದಾರೆ.
ಇದನ್ನೂ ಓದಿ :ಪಾಕಿಸ್ತಾನದ ಪರ ಪೋಸ್ಟ್ ಹಾಕಿದ್ದಾನೆಂದು ಎಗ್ರೈಸ್ ಅಂಗಡಿಗೆ ಬೆಂಕಿ ಇಟ್ಟ ಯುವಕರು
ಧೀರ ಯೋಧರಿಗೆ ಸಿಂಧೂರದಾರತಿ ಬೆಳಗಿ ಸನ್ಮಾನ..!
ತುರ್ತು ಸೇವೆಗೆ ಎಂದು ತೆರಳುತ್ತಿದ್ದ ಯೋಧರಿಗೆ ಗ್ರಾಮಸ್ಥರು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದು. ಹಣೆಗೆ ಸಿಂಧೂರ ತಿಲಕ ಇಟ್ಟು, ಆರತಿ ಬೆಳಗಿ ಯೋದರನ್ನು ಸೇವೆಗೆ ಕಳುಹಿಸಿದ್ದಾರೆ. ನಿನ್ನೆಯೆ 8 ಜನರು ಯೋಧರು ಗಡಿಗೆ ತೆರಳಿದ್ದರು. ಇಂದು ಉಳಿದ 8 ಯೋಧರು ತಮ್ಮ ತಮ್ಮ ರೆಜಿಮೆಂಟ್, ಯುನಿಟ್‌ಗಳತ್ತ ಪಯಣ ಬೆಳೆಸಿದ್ದಾರೆ. ಈ ವೇಳ ಮಾತನಾಡಿದ ಯೋದರು ನಮಗೆ ದೇಶ ಮೊದಲು ನಂತರ ವೈಯಕ್ತಿಕ ಜೀವನ. ಪಾಕ್ ವಿರುದ್ದ ಯುದ್ದ ಮಾಡಲು ತುದಿಕಾಲಲ್ಲಿ ನಿಂತಿದ್ಧೇವೆ ಎಂದು ಹೇಳಿದರು.