ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ “ಆಪರೇಷನ್ ಸಿಂಧೂರ್” ಹೆಸರಿನಲ್ಲಿ ಮೇ.7ರಂದು ಕಾರ್ಯಚರಣೆ ನಡೆಸಿದ್ದು. ಈ ಕಾರ್ಯಚರಣೆಯಲ್ಲಿ ಭಾರತಕ್ಕೆ ಬೇಕಾಗಿದ್ದ 5 ಮೋಸ್ಟ್ ವಾಂಟೆಡ್ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.
ಮೇ.7 ರಂದು ಭಾರತೀಯ ಸೇನೆ ಮಿಸೈಲ್ ಮತ್ತು ಕ್ಷಿಪಣಿಗಳನ್ನ ಬಳಸಿಕೊಂಡು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರತಾಣಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇವರಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ನ 10 ಜನ ಕುಟುಂಬಸ್ಥರು ಸಾವನ್ನಪ್ಪಿದ್ದರು. ಮಸೂದ್ ಅಜರ್ ತಮ್ಮ ಆಬ್ದುಲ್ ರೌಫ್ ಕೂಡ ಸಾವನ್ನಪ್ಪಿದ್ದನು.
ಇದನ್ನೂ ಓದಿ :ಸ್ವಯಂ ಸೇವಕರಾಗಲು ಯುವಕರ ಉತ್ಸಾಹ: ಪ್ರಾಣವನ್ನೇ ನೀಡಲು ಸಿದ್ದವೆಂದ ಯುವಪಡೆ
ಇದರ ನಡುವೆ ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ ಭಾರತಕ್ಕೆ ಬೇಕಾಗಿದ್ದ ಪ್ರಮುಖ 5 ಉಗ್ರರು ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿದ ಉಗ್ರರ ಯಾರು ಎಂಬ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.
ಉಗ್ರ ನಂ.1: ಮುದಾಸರ್ ಖಾದಿಯಾನ್ ಖಾಸ್ @ ಮುದಾಸರ್ @ ಅಬು ಜುಂದಾಲ
ಮುದಾಸರ್ ಖಾದಿಯಾನ್ ಎಂಬಾತ ಭಾರತದ ದಾಳಿಯಲ್ಲಿ ಸಾವನ್ನಪ್ಪಿದ್ದು. ಈತ ಲಷ್ಕರ್-ಎ-ತೈಬಾದ ಪ್ರಮುಖ ಕಮಾಂಡರ್ಗಳಲ್ಲಿ ಒಬ್ಬ. ಈತನಿಗೆ ಮುರಿಡ್ಕೆಯ ಮರ್ಕಜ್ ತೈಬಾದ ಉಸ್ತುವಾರಿ ನೀಡಲಾಗಿದೆ.
ಇತನನ್ನು ಮೇ,7 ರಂದು ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದ್ದು. ಈತನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮತ್ತು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಸಿಎಂ ಮರ್ಯಮ್ ನವಾಜ್ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಈತನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಈತನ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ಉಗ್ರ ನಂ 2: ಹಫೀಜ್ ಮುಹಮ್ಮದ್ ಜಮೀಲ್
ಹಫೀಜ್ ಮುಹಮ್ಮದ್ ಜಮೀಲ್ ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ಸಂಬಂಧ ಹೊಂದಿದ್ದು. ಮೌಲಾನ ಮಸೂದ್ ಅಜರ್ನ ಹಿರಿಯ ಸೋದರ ಮಾವನಾಗಿದ್ದಾನೆ. ಇನ್ನು ಈತನಿಗೆ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾ ದರ್ಗಾದ ಉಸ್ತುವಾರಿ ನೀಡಲಾಗಿದ್ದು. ಈತ ಯುವಕರಿಗೆ ಮೂಲಭೂತವಾದದ ಬಗ್ಗೆ ಬೋಧನೆ ಮಾಡುತ್ತಿದ್ದನು ಜೊತೆಗೆ ಉಗ್ರ ಕೃತ್ಯ ನಡೆಸಲು ನಿಧಿ ಸಂಗ್ರಹಣೆಯಲ್ಲಿ ಸಕ್ರಿಯನಾಗಿದ್ದನು.
ಇದನ್ನೂ ಓದಿ :ಯುದ್ಧದ ಮುನ್ಸೂಚನೆ: ರೈಲು, ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ
ಉಗ್ರ ನಂ. 3 : ಮೊಹಮ್ಮದ್ ಯೂಸುಫ್ ಅಜರ್ @ ಉಸ್ತಾದ್ ಜಿ @ ಮೊಹಮ್ಮದ್ ಸಲೀಮ್ @ ಘೋಸಿ ಸಹಾಬ್
ಇನ್ನು ಈತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದು ಮೌಲಾನಾ ಮಸೂದ್ ಅಜರ್ ಸಂಬಂಧಿಯಾಗಿದ್ದಾನೆ. ಉಗ್ರರಿಗೆ ಶಸ್ತ್ರಸ್ತ ತರಬೇತು ನೀಡುತ್ತಿದ್ದ ಈತ ಜಮ್ಮು ಕಾಶ್ಮೀರದ ಅನೇಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೇ ಕಂದಹಾರ ವಿಮಾನ ಹೈಜಾಕ್ ಪ್ರಕರಣದಲ್ಲಿ ಬೇಕಾಗಿರುವ ಅಪರಾಧಿಯಾಗಿದ್ದಾನೆ.
ಉಗ್ರ ನಂ 4. ಅಬು ಆಕಾಶಾ @ ಖಾಲಿದ್
ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿರುವ ಈತ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿರುವ ಈತನ ಅಂತ್ಯಕ್ರಿಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ :ಯುದ್ದದ ಸನ್ನಿವೇಶವಿದೆ; ಧವಸ, ಧಾನ್ಯ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್
ಉಗ್ರ ನಂ 5. ಮೊಹಮ್ಮದ್ ಹಸನ್ ಖಾನ್
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖನಾಗಿರುವ ಈತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಅವರ ಮಗ.ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.