Saturday, May 10, 2025

ಪಾಕಿಸ್ತಾನದ ಫತಾಹ್-II ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ಭಾರತ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಪಾಕಿಸ್ತಾನವು ಮೇ 9ಮಧ್ಯರಾತ್ರಿ ‘ಫತೇಹ್-II’ ಎಂಬ ಭಾರಿ ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸಿದೆ. ಈ ದಾಳಿಯನ್ನು ಭಾರತದ ಹರಿಯಾಣದ ಸಿರ್ಸಾದಲ್ಲಿ ಯಶಸ್ವಿಯಾಗಿ ಆಕಾಶದಲ್ಲೇ ಹೊಡೆದುರುಳಿಸಲಾಗಿದೆ.

ಶುಕ್ರವಾರದಿಂದ ಶನಿವಾರದವರೆಗೆ ರಾತ್ರಿಯಿಡೀ ಭಾರತದ ಅನೇಕ ನಗರಗಳ ಮೇಲೆ ಅಪ್ರಚೋದಿತ ದಾಳಿ ಮುಂದುವರಿಸಿರುವ ಪಾಕಿಸ್ತಾನ,  ಬ್ಯಾಲಿಸ್ಟಿಕ್​ ಕ್ಷಿಪಣಿಗಳನ್ನು ಉಡಾಯಿಸಿದೆ. ಭಾರತದ ಮೂರು ಪ್ರಮುಖ ವಾಯುಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದ್ದು. ರಾವಲ್ಪಿಂಡಿಯ ನೂರ್​ಖಾನ್​ ವಾಯುನೆಲೆ ಮತ್ತು ಚಕ್ವಾಲ್​ನಲ್ಲಿ ಮುರಿಯದ್​ ವಾಯುನೆಲೆ ಮತ್ತು ಶೋಕೋರ್ಟ್​ನಲ್ಲಿರುವ ರಫಿಕಿ ವಾಯುನೆಲೆಯಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇದನ್ನೂ ಓದಿ :ಪಾಕ್​ನಿಂದ ಶೆಲ್​ ದಾಳಿ: ಜಮ್ಮುವಿನ ಹಿರಿಯ ಅಧಿಕಾರಿ ಸೇರಿದಂತೆ, ಇಬ್ಬರು ನಾಗರಿಕರು ಸಾ*ವು

ಆದರೆ ಭಾರತದ ವಾಯು ರಕ್ಷಣ ಪಡೆ ಈ ಎಲ್ಲಾ ದಾಳಿಗಳನ್ನು ತಡೆದಿದ್ದು. ಎಲ್ಲಾ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದೆ.

ಫತೇ-II ಕ್ಷಿಪಣಿಯ ಬಗ್ಗೆ ಮಾಹಿತಿ..!

ಫತಾಹ್-II ಒಂದು ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷಿಪಣಿ ಗೈಡೆಡ್​ ಕ್ಷಿಪಣಿಯಾಗಿದ್ದು. ನಿರ್ದೇಶಿತ ಗುರಿಯನ್ನು ಹೊಡೆದುರುಳಿಸುವ ಸಾಮಾರ್ಥ್ಯವಿದೆ. ಈ ಕ್ಷಿಪಣಿಯನ್ನು ಸಾಮಾನ್ಯವಾಗಿ ಮಿಲಿಟರಿ ನೆಲೆಗಳು, ಸಂವಹನ ಸೌಲಭ್ಯಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಂತಹ ಹೆಚ್ಚಿನ ಮೌಲ್ಯದ ಗುರಿಗಳ ಮೇಲೆ ನಿಖರವಾದ ದಾಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ :ಪಾಕಿಸ್ತಾನದ ಸೇನಾ ನೆಲೆ ಮತ್ತು ಡ್ರೋನ್​ ಲಾಂಚ್​ಪ್ಯಾಡ್​​ಗಳನ್ನು ಧ್ವಂಸಗೊಳಿಸಿದ ಭಾರತ

ಫತಾಹ್-II ಕ್ಷಿಪಣಿಯನ್ನು ಅಮೇರಿಕಾದ HIMARS ನಿರ್ಮಾಣದ GMLRS ಕ್ಷಿಪಣಿ ಅಥವಾ ಚೀನಾದ PHL ಕ್ಷಿಪಣಿ ವ್ಯವಸ್ಥೆಗೆ ಹೋಲಿಸಲಾಗಿದ್ದು.ಪಾಕಿಸ್ತಾನ ಈ ಕ್ಷಿಪಣಿಯನ್ನು ಸ್ಥಳಿಯವಾಗಿ ಅಭಿವೃದ್ದಿಪಡಿಸಿದೆ. ಈ ಕ್ಷಿಪಣಿ ಅಭಿವೃದ್ದಿಯಲ್ಲಿ ಚೀನಾ ಮಹತ್ವದ ಪಾತ್ರ ವಹಿಸಿದೆ.

RELATED ARTICLES

Related Articles

TRENDING ARTICLES