Friday, May 9, 2025

India vs Pakistan War : ಫೇಕ್​ ನ್ಯೂಸ್​​ಗಳಿಂದ ದೂರವಿರಿ; ರೋಹಿತ್​ ಶರ್ಮಾ ಸಂದೇಶ

ಮುಂಬೈ: ಭಾರತೀಯ ಮೂರು ಸೇನೆಗಳು ಪ್ರತಿ ಕ್ಷಣ ತೆಗೆದುಕೊಳ್ಳುತ್ತಿರುವ ಪ್ರತಿಯೊಂದು ನಿರ್ಧಾರಗಳು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ ಎಂದು ಟೀಂ ಇಂಡಿಯಾ ಆಟಗಾರ ರೋಹಿತ್​ ಶರ್ಮಾ ಅವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ದಾಳಿ ಬೆನ್ನೆಲ್ಲೆ 18ನೇ ಐಪಿಎಲ್ ಆವೃತ್ತಿಯ​ ಉಳಿದ 16 ಪಂದ್ಯಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವಂತೆ ಬಿಸಿಸಿಐ ಆದೇಶ ಹೊರಡಿಸಿರುವ ಹಿನ್ನೆಲೆ ರೋಹಿತ್​ ಶರ್ಮಾ ಅವರ ಎಕ್ಸ್​​ ಖಾತೆಯಲ್ಲಿ ಬರೆದುಕೊಂಡಿದ್ದು, ಭಾರತೀಯ ಮೂರು ಸೇನೆಗಳು ಪ್ರತಿ ಕ್ಷಣ ತೆಗೆದುಕೊಳ್ಳುತ್ತಿರುವ ಪ್ರತಿಯೊಂದು ನಿರ್ಧಾರಗಳು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಯುದ್ದದ ಕಾರ್ಮೋಡದಿಂದ IPL ಪಂದ್ಯಾವಳಿ ಸ್ಥಗಿತ: BCCI ನಿರ್ಧಾರ ಸ್ವಾಗತಿಸಿದ RCB

ಅದುವಲ್ಲದೇ, ನಮ್ಮ ಯೋಧರು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಎತ್ತರವಾಗಿ ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯರು ಜವಾಬ್ದಾರಿಯುತವಾಗಿರುವುದು ಮತ್ತು ಯಾವುದೇ ನಕಲಿ ಸುದ್ದಿಗಳನ್ನು ಹರಡುವುದರಿಂದ ಅಥವಾ ನಂಬುವುದರಿಂದ ದೂರವಿರುವುದು ಮುಖ್ಯ. ಎಲ್ಲರೂ ಸುರಕ್ಷಿತವಾಗಿರಿ ಎಂದು ರೋಹಿತ್​ ಶರ್ಮಾ ಅವರು ಭಾರತ ನಾಗರಿಕರಿಗೆ ಸಂದೇಶ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES