ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ನಡುವೆ ಗಡಿಯಲ್ಲಿ ಭಾರೀ ಬೆಳವಣಿಗೆಯಾಗುತ್ತಿದ್ದು. ಇದರ ನಡುವೆ ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿರುವ HAL ಸಿಬ್ಬಂದಿಗಳ ಎಲ್ಲಾ ರಜೆಯನ್ನು ರದ್ದುಗೊಳಿಸಿದ್ದು. ಹೆಚ್ಚು ಸಮಯ ಕೆಲಸ ಮಾಡಲು ಸಿದ್ದರಿರುವಂತೆ ಸೂಚನೆ ನೀಡಲಾಗಿದೆ. ಎಂತಹದೇ ತುರ್ತು ಪರಿಸ್ಥಿತಿ ನಿರ್ಮಾಣವಾದರೂ ಅದನ್ನು ಎದುರಿಸಲು ನಿರ್ದೇಶನ ನೀಡಲಾಗಿದೆ.
ಆಪರೇಷನ್ ಸಿಂದೂರ್ ನಂತರದ ಬೆಳವಣಿಗೆಗಳಿಂದ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಹೆಚ್ಎಎಎಲ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್ಎಎಎಲ್ನ ಎಲ್ಲ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧರಿರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ :ಯುದ್ದದ ಕಾರ್ಮೋಡದಿಂದ IPL ಪಂದ್ಯಾವಳಿ ಸ್ಥಗಿತ: BCCI ನಿರ್ಧಾರ ಸ್ವಾಗತಿಸಿದ RCB
ಯುದ್ಧ ವಿಮಾನಗಳ ನಿರ್ವಹಣೆಯ ಕಾರಣ ಕಡ್ಡಾಯ ಹಾಜರಿರುವಂತೆ ಸಿಬ್ಬಂದಿಗೆ, ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ತಯಾರಿ ನಡೆಸುವಂತೆ ನಿರ್ದೇಶನ ನೀಡಿದೆ. ಈ ನಿರ್ದೇಶನ ಭಾರೀ ಸಂಘರ್ಷದ ಸಾಧ್ಯತೆಯ ಸೂಚಕವಾಗಿದೆ.
ಇದನ್ನೂ ಓದಿ :ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಖ್ಯಾತಿಯ ಚೈತ್ರ ಕುಂದಾಪುರ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತೀಯ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದೆ. 1940 ರ ಡಿಸೆಂಬರ್ 23 ರಂದು ಸ್ಥಾಪನೆಯಾದ ಹೆಚ್ಎಎಲ್ ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ.