Saturday, May 10, 2025

ದೇಶ ದ್ರೋಹಿ ಪೋಸ್ಟ್​: ‘ಸಿಂಧೂರ’ಕ್ಕೆ ಧಿಕ್ಕಾರ ಎಂದಿದ್ದ ಕರಾವಳಿ ಯುವತಿ ಮೇಲೆ ನೆಟ್ಟಿಗರ ಆಕ್ರೋಶ

ಮಂಗಳೂರು : ಪಹಲ್ಗಾಮ್​ ಮೇಲಿನ ದಾಳಿಗೆ ಭಾರತ ‘ಆಪರೇಷನ್​ ಸಿಂಧೂರ್​’ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಂಡಿದೆ. ಇದಕ್ಕೆ ದೇಶದೆಲ್ಲಡೆ ಸಂತಸ ವ್ಯಕ್ತವಾಗುತ್ತಿದ್ದು. ಭಾರತೀಯ ಸೇನೆಯ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಮಂಗಳೂರಿನಲ್ಲಿ ಸ್ನಾನಕೋತ್ತರ ವಿದ್ಯಾರ್ಥಿನಿಯೊಬ್ಬಳು ಸೇನಾ ಕಾರ್ಯಚರಣೆಗೆ ಧಿಕ್ಕಾರವೆಂದು ಪೋಸ್ಟ್​ ಹಾಕಿದ್ದಾಳೆ. ಇದಕ್ಕೆ ಇದೀಗ ಎಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ದಕ್ಷಿಣ ಕನ್ನಡದ, ಬೆಳ್ತಂಗಡಿ ನಿವಾಸಿ ಬೆಳಾಲು ನಿವಾಸಿ ರೇಷ್ಮಾ ಎಂಬಾಕೆ ಸಾಮಾಜಿಕ ಜಾಲತಾಣ ಇನ್ಸ್ಟ್​ಗ್ರಾಂನಲ್ಲಿ ಈ ಪೋಸ್ಟ್​ ಹಾಕಿದ್ದು. ಪೋಸ್ಟ್​ನಲ್ಲಿ ‘ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು, ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ.., ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿತು ಕತ್ತಲು.. ಎಲ್ಲೆಲ್ಲೂ ಕತ್ತಲು..!’ ಎಂದು ಬರೆದುಕೊಂಡಿದ್ದು. ಇದರ ಕೆಳಗೆ # dikkaraoperationsindura ಎಂಬ ಹ್ಯಾಶ್​ಟ್ಯಾಗ್​ ಹಾಕಿದ್ದಾರೆ.

ಇದನ್ನೂ ಓದಿ :300 ರಿಂದ 400 ಡ್ರೋನ್​ ಬಳಸಿ ಪಾಕ್ ದಾಳಿ ನಡೆಸಿದೆ, ಇಬ್ಬರು ವಿದ್ಯಾರ್ಥಿಗಳ ಸಾವು: ವಿದೇಶಾಂಗ ಇಲಾಖೆ

ಇನ್ನು ಈ ಪೋಸ್ಟ್​​ಗೆ ಭಾರೀ ಆಕ್ರೋಶ ಕೇಳಿಬಂದ ಹಿನ್ನಲ್ಲೆ ವಿದ್ಯಾರ್ಥಿನಿ ಪೋಸ್ಟ್​​ನ್ನು ಡಿಲಿಟ್​ ಮಾಡಿದ್ದು. ನಂತರ ತನ್ನನ್ನು ತಾನೂ ಸಮರ್ಥಿಸಿಕೊಂಡು ಮತ್ತೊಂದು ಪೋಸ್ಟ್​ ಹಾಕಿದ್ದಾರೆ.

ಏನಿದೆ ಮತ್ತೊಂದು ಪೋಸ್ಟ್​ನಲ್ಲಿ..!

ತಪ್ಪಿನ ಅರಿವಾಗಿ ಮತ್ತೊಂದು ಪೋಸ್ಟ್​ ಹಾಕಿರುವ ರೇಷ್ಮಾ ‘ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ನನಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ.  ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.

ಇದನ್ನೂ ಓದಿ :ಆಪರೇಷನ್​ ಸಿಂಧೂರ: ದೇಶದ ರಕ್ಷಣೆಗೆ ಅಚಲರಾಗಿರುವ ಯೋಧರಿಗೆ ಧನ್ಯವಾದ ತಿಳಿಸಿದ ನಟ ಯಶ್​

ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ, ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ’ ಎಂದು ರೇಷ್ಮಾ ಪೋಸ್ಟ್ ಮಾಡಿದ್ದಾರೆ.

ರೇಷ್ಮಾರನ್ನು ಬಂಧಿಸುವಂತೆ ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು. ವಿದ್ಯಾರ್ಥಿನಿ ವಿರುದ್ದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES