ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರನ್ನು 27 ವರ್ಷದ ಮುರುಳಿ ನಾಯ್ಕ ಎಂದು ಗುರುತಿಸಲಾಗಿದೆ.
ಆಂದ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಗುಂಡ್ಲಪಲ್ಲೇ ಗ್ರಾಮದ ಮುರಳಿ ನಾಯಕ್ (27) ಎಂಬ ಯೋಧ ಪಾಕಿಗಳ ಗುಂಡಿಗೆ ಬಲಿಯಾಗಿದ್ದು. ಗುರುವಾರ (ಮೇ 8) ರಾತ್ರಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ :ಮುಂದಿನ ವಾರದಿಂದ ಐಪಿಎಲ್ ದ್ವಿತೀಯಾರ್ಧ ಆರಂಭವಾಗೋದು ಪಕ್ಕಾ..!
ಗೋರಂಟ್ಲಾದ ಸ್ಥಳೀಯ ಪೊಲೀಸರ ಪ್ರಕಾರ, ಶ್ರೀರಾಮ್ ನಾಯಕ್ ಅವರ ಪುತ್ರ ಮುರಳಿ ನಾಯಕ್ ಬುಡಕಟ್ಟು ಹಳ್ಳಿಯ ಬಡ ಕೃಷಿ ಕುಟುಂಬದಿಂದ ಬಂದವರು. ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಸಿದೆ. ಮೃತ ಮುರುಳಿ ನಾಯ್ಕರನ್ನು ಇದೇ ಉದ್ವಿಘ್ನ ಗಡಿಯಲ್ಲಿ ನಿಯೋಜಿಸಿದ್ದು. ಅವರು ಕಳೆದ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಾಣ ತೆತ್ತಿದ್ದಾರೆ.
ಇದನ್ನೂ ಓದಿ :‘ಮೋದಿ ಹೆಸರೇಳಲು ಹೆದರುವ ರಣಹೇಡಿ ನಮ್ಮ ಪ್ರಧಾನಿ’: ಪಾಕ್ ಸಂಸತ್ತಿನಲ್ಲಿ ಪಾಕ್ ಪ್ರಧಾನಿ ಮಾನಭಂಗ
ಇನ್ನು ಮುರಳಿ ನಾಯಕ್ ಸಾವಿನ ಸುದ್ದಿ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ಕಲ್ಲಿ ಥಂಡಾ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಬಡ ಬುಡಕಟ್ಟು ಸಮುದಾಯದಲ್ಲಿ ಮೌನ ಆವರಿಸಿದ್ದು. ಏಕೈಕ ಪುತ್ರನನ್ನು ಕಳೆದುಕೊಂಡ ಮುದವತ್ ಶ್ರೀರಾಮ್ ಥಂಡಾ ಮತ್ತು ಮುದವತ್ ಜ್ಯೋತಿ ಬಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಆಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೂಡ ಕುಟುಂಬದವರಿಗೆ ಸಾಂತ್ವಾನ ಹೇಳಲು ಬರಲಿದ್ದಾರೆ ಎಂದು ತಿಳಿದು ಬಂದಿದೆ.