Friday, May 9, 2025

ಗಡಿ ನುಸುಳಲು ಯತ್ನಿಸಿದ 7 ಜೈಷ್​ ಉಗ್ರರನ್ನು ಹೊಡೆದುರುಳಿಸಿದ BSF ಯೋಧರು

ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನತೆ ನಡುವೆ ಗಡಿ ನುಸುಳಿ ಭಾರತಕ್ಕೆ ಬರಲು ಯತ್ನಿಸಿದ 7 ಜನ ಉಗ್ರರನ್ನು ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ್ದು. ಈ ಕುರಿತಾದ ಮಾಹಿತಿಯನ್ನು ಸಾಮಾಜಿಕ BSF ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ, ಸಾಂಭಾದಲ್ಲಿ ಉಗ್ರರು ಒಳ ನುಸುಳಲು ಭಾರತದ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್​ ವಿಫಲಗೊಳಿಸಿದ್ದು. 7 ಜನ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಇದನ್ನೂ ಓದಿ :ಸ್ವತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ: ರಾಯಭಾರ ಕಛೇರಿ ತೆರೆಯಲು ಭಾರತಕ್ಕೆ ಮನವಿ

ನಿನ್ನೆ ರಾತ್ರಿ ಪಾಕಿಸ್ತಾನ ಡ್ರೋನ್​ ಮತ್ತು ಮಿಸೈಲ್​ಗಳನ್ನು ಬಳಸಿ ಭಾರತದ ಹಲವು ನಗರಗಳ ಮೇಲೆ ದಾಳಿಗೆ ಯತ್ನಿಸಿದ್ದು. ಈ ಎಲ್ಲಾ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್​ ಸೇರಿದಂತೆ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲಾಗಿದೆ.

RELATED ARTICLES

Related Articles

TRENDING ARTICLES