ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ‘ಆಪರೇಷನ್ ಸಿಂಧೂರ್’ ಕೈಗೊಂಡ ಬಗ್ಗೆ ಸರ್ಕಾರವನ್ನು ಶ್ಲಾಘಿಸಿದ್ದಾರೆ ಮತ್ತು ಭಾರತದ ಭದ್ರತೆಗಾಗಿ ಪಾಕಿಸ್ತಾನದೊಳಗೆ ದಾಳಿಗಳು ಅನಿವಾರ್ಯ ಎಂದು ಹೇಳಿದ್ದಾರೆ.
“ಪಹಲ್ಗಾಮ್‌ನಲ್ಲಿ ನಿರಾಯುಧ ಪ್ರವಾಸಿಗರ ಮೇಲೆ ನಡೆದ ಹೇಡಿತನದ ದಾಳಿಯ ನಂತರ ಪಾಕ್ ಪ್ರಾಯೋಜಿತ ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರ ವಿರುದ್ಧ ತೆಗೆದುಕೊಂಡ ‘ಆಪರೇಷನ್ ಸಿಂಧೂರ್’ ಎಂಬ ನಿರ್ಣಾಯಕ ಕ್ರಮಕ್ಕಾಗಿ ಕೇಂದ್ರ ಸರ್ಕಾರದ ನಾಯಕತ್ವ ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ನಾವು ಅಭಿನಂದಿಸುತ್ತೇವೆ. ಹಿಂದೂ ಪ್ರವಾಸಿಗರ ಕ್ರೂರ ಹತ್ಯಾಕಾಂಡದಲ್ಲಿ ನೊಂದ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸುವ ಈ ಕ್ರಮವು ಇಡೀ ದೇಶದ ಸ್ವಾಭಿಮಾನ ಮತ್ತು ನೈತಿಕತೆಯನ್ನು ಹೆಚ್ಚಿಸಿದೆ ಎಂದು ಭಾಗವತ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ :ಪಾಕಿಗಳಿಂದ ಗುಂಡಿನ ದಾಳಿ: ಭಾರತದ ಓರ್ವ ಯೋಧ ಹುತಾತ್ಮ
ಇತ್ತೀಚಿನ ದಿನಗಳಲ್ಲಿ ಭಾರತ ತೆಗೆದುಕೊಂಡ ಕ್ರಮವನ್ನು “ಅಗತ್ಯ” ಎಂದು ಬಣ್ಣಿಸಿದ ಭಾಗವತ್, “ಪಾಕಿಸ್ತಾನದಲ್ಲಿ ಭಯೋತ್ಪಾದಕರು, ಅವರ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಗಳ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದು ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ, ಇಡೀ ದೇಶವು ಸರ್ಕಾರ ಮತ್ತು ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ ಎಂದು ಹೇಳಿದರು.
ಇದನ್ನೂ ಓದಿ :ಮುಂದಿನ ವಾರದಿಂದ ಐಪಿಎಲ್ ದ್ವಿತೀಯಾರ್ಧ ಆರಂಭವಾಗೋದು ಪಕ್ಕಾ..!
ಇನ್ನ ಭಾರತದ ಗಡಿಯಲ್ಲಿರುವ ಧಾರ್ಮಿಕ ಸ್ಥಳಗಳ ಮೇಲೆ ಮತ್ತು ನಾಗರಿಕೆ ವಸತಿ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿ ಬಗ್ಗೆ ಆರ್ಎಸ್ಎಸ್ ಖಂಡಿಸಿದ್ದು. ದಾಳಿಯಲ್ಲಿ ಬಲಿಯಾದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ನಮ್ಮ ಪವಿತ್ರ ನಾಗರಿಕ ಕರ್ತವ್ಯವನ್ನು ನಿರ್ವಹಿಸುವಾಗ, ನಾವೆಲ್ಲರೂ ಜಾಗರೂಕರಾಗಿರಬೇಕು ಮತ್ತು ಸಾಮಾಜಿಕ ಏಕತೆ ಮತ್ತು ಸಾಮರಸ್ಯವನ್ನು ಕದಡುವಲ್ಲಿ ರಾಷ್ಟ್ರವಿರೋಧಿ ಶಕ್ತಿಗಳ ಯಾವುದೇ ಪಿತೂರಿ ಯಶಸ್ವಿಯಾಗಲು ಬಿಡಬಾರದು” ಎಂದು ಅವರು ನಾಗರಿಕರಿಗೆ ಮನವಿ ಮಾಡಿದರು.