Wednesday, May 7, 2025

‘ಭಾರತ ನಡೆಸಿದ ದಾಳಿಯನ್ನ ಯುದ್ದವೆಂದೇ ಪರಿಗಣಿಸುತ್ತೇವೆ’; ಪಾಕಿಸ್ತಾನ ಪ್ರಧಾನಿ ಶಹಬಾಜ್​ ಷರೀಫ್​

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ್ದು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಷರೀಫ್​ ‘ಭಾರತದ ದಾಳಿಯನ್ನು ಯುದ್ದದ ಕೃತ್ಯವೆಂದು ಪರಿಗಣಿಸುತ್ತೇವೆ, ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಹೇಳಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡಿದ್ದು. ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಪ್ರಮುಖ ಉಗ್ರ ಸಂಘಟನೆಗಳ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದು. ಅನೇಕ ಉಗ್ರರು ಸಾವಿನ ಸನಿಹ ತಲುಪಿದ್ದಾರೆ. ಇದಕ್ಕೆ ಪಾಕಿಸ್ತಾನದ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದ ಜೆಎಫ್​-17 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ ವಾಯುಪಡೆ..!

ಸೂಕ್ತ ಉತ್ತರ ಕೊಡುತ್ತೇವೆ ಎಂದ ಪಾಕಿ ಪ್ರಧಾನಿ..!

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಗ್ರರ ಪೋಷಕ ಪಾಕಿಸ್ತಾನದ ಪ್ರಧಾನಿ “ಭಾರತ ನಡೆಸಿರುವ ಈ ಯುದ್ಧಕ್ಕೆ ಬಲವಾದ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕು ಪಾಕಿಸ್ತಾನಕ್ಕೆ ಇದೆ. ಶತ್ರುಗಳನ್ನು ಹೇಗೆ ಎದುರಿಸಬೇಕೆಂದು ಪಾಕಿಸ್ತಾನ ರಾಷ್ಟ್ರ ಮತ್ತು ಅದರ ಸಶಸ್ತ್ರ ಪಡೆಗಳಿಗೆ ಚೆನ್ನಾಗಿ ತಿಳಿದಿದೆ. ಶತ್ರು ತನ್ನ ದುರುದ್ದೇಶಪೂರಿತ ಉದ್ದೇಶಗಳಲ್ಲಿ ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ” ಎಂದು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಭಾರತ ಘೋಷಿಸಿದ ಕೆಲವೇ ನಿಮಿಷಗಳ ನಂತರ ಪಾಕ್​ ಪ್ರಧಾನಿ ಷರೀಫ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ :ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರ ಮೇಲೆ ‘ಆಪರೇಷನ್​ ಸಿಂಧೂರ’ ಕಾರ್ಯಚರಣೆ

“ಭಾರತದ ಆಕ್ರಮಣಕಾರಿ ಕೃತ್ಯವು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಹುತಾತ್ಮತೆಗೆ ಕಾರಣವಾಗಿದೆ. ಈ ಆಕ್ರಮಣಕಾರಿ ಕೃತ್ಯವು ವಾಣಿಜ್ಯ ವಿಮಾನ ಸಂಚಾರಕ್ಕೂ ಗಂಭೀರ ಬೆದರಿಕೆಯ ಉಂಟುಮಾಡಿದೆ. ಎಂದು ಪಾಕಿಸ್ತಾನದ ಪ್ರಧಾನಿ ಬಾಯಿ ಬಡಿದುಕೊಂಡಿದ್ದಾನೆ.

RELATED ARTICLES

Related Articles

TRENDING ARTICLES