ಹರಿಯಾಣ : ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತ ಪ್ರತಿಕಾರ ತೆಗೆದುಕೊಂಡಿದ್ದು. ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಚರಣೆ ನಡೆಸಿದ ಭಾರತೀಯ ಸೇನೆ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೆ ಶುಭಂ ದ್ವಿವೇಧಿ ಅವರ ಪತ್ನಿ ಅಶಾನ್ಯ ದ್ವಿವೇದಿ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ನೇಪಾಳದ ಓರ್ವ ಪ್ರವಾಸಿಗ ಸೇರಿದಂತೆ 27 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಕೆಲ ತಿಂಗಳ ಹಿಂದೆ ಮದುವೆಯಾಗಿ ಹನಿಮೂನ್ಗೆ ಎಂದು ಪಹಲ್ಗಾಂಗೆ ಬಂದಿದ್ದ ಶುಭಂ ದ್ವಿವೇದಿ ಅವರು ಕೂಡ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇದೀಗ ಪ್ರತಿಕಾರದ ಬಳಿಕ ಶುಭಂ ದ್ವಿವೇದಿ ಅವರ ಪತ್ನಿ ಅಶಾನ್ಯ ದ್ವಿವೇದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ:‘ಭಾರತ ನಡೆಸಿದ ದಾಳಿಯನ್ನ ಯುದ್ದವೆಂದೇ ಪರಿಗಣಿಸುತ್ತೇವೆ’; ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್
#WATCH | #OperationSindoor | Wife of Shubham Dwivedi who lost his life in #PahalgamTerroristAttack, says, “I want to thank PM Modi for taking revenge for my husband’s death. My entire family had trust in him, and the way he replied (to Pakistan), he has kept our trust alive. This… pic.twitter.com/SbSsFcWU1k
— ANI (@ANI) May 7, 2025
ಈ ಕುರಿತು ಅಂತರ್ ರಾಷ್ಟ್ರೀಯ ಮಾಧ್ಯಮವಾದ ಎಎನ್ಐಗೆ ಅಶಾನ್ಯ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದು. “ನನ್ನ ಪತಿಯ ಸಾವಿಗೆ ಸೇಡು ತೀರಿಸಿಕೊಂಡ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಇಡೀ ಕುಟುಂಬ ಅವರ ಮೇಲೆ ನಂಬಿಕೆ ಇಟ್ಟಿತ್ತು, ಮತ್ತು ಅವರು (ಪಾಕಿಸ್ತಾನಕ್ಕೆ) ಪ್ರತಿಕ್ರಿಯಿಸಿದ ರೀತಿ ನಮ್ಮ ನಂಬಿಕೆಯನ್ನು ಜೀವಂತವಾಗಿರಿಸಿದೆ. ಇದು ನನ್ನ ಪತಿಗೆ ನೀಡುವ ನಿಜವಾದ ಗೌರವ. ನನ್ನ ಪತಿ ಎಲ್ಲೇ ಇದ್ದರೂ, ಅವರು ಇಂದು ಶಾಂತಿಯಿಂದ ಇರುತ್ತಾರೆ,” ಎಂದು ಅಶಾನ್ಯಾ ದ್ವಿವೇದಿ ANI ಗೆ ತಿಳಿಸಿದರು.
ಇದನ್ನೂ ಓದಿ:ಪಾಕಿಸ್ತಾನದ ಜೆಎಫ್-17 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ ವಾಯುಪಡೆ..!