ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಪಾಕಿಸ್ತಾನದ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ತಾಣಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಚರಣೆ ನಡೆಸಿದೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದು. ಘಟನೆ ಬಗ್ಗೆ ಭಾರತದಾದ್ಯಂತ ಸಂಭ್ರಮಾಚರಣೆ ವ್ಯಕ್ತವಾಗಿದೆ. ಇದಕ್ಕೆ ಟ್ವಿಟ್ ಮಾಡಿ ಸಂತಸ ಹಂಚಿಕೊಂಡಿರುವ ಜಗ್ಗೇಶ್ ‘ ಮೋದಿಯನ್ನು ಭಾರತದ ಪ್ರಚಂಡ ಎಂದು ಕರೆದು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ:‘ಪಹಲ್ಗಾಂನಲ್ಲಿ ಮೃತಪಟ್ಟವರಿಗೆ ನ್ಯಾಯ ಕೊಡಿಸಲು ಈ ದಾಳಿ ಪ್ರಾರಂಭಿಸಿದ್ದೇವೆ’: ಭಾರತ ಸರ್ಕಾರ
ಕನ್ನಡ ಚಿತ್ರರಂಗದ ನಟ-ನಟಿಯರು ಸೇರಿದಂತೆ ದೇಶಾದ್ಯಂತ ಆಪರೇಷನ್ ಸಿಂಧೂರ ಬಗ್ಗೆ ಸಂತಸ ವ್ಯಕ್ತವಾಗಿದ್ದು. ಭಾರತ ಸೇನೆ ಮತ್ತು ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ. ಇದರ ನಡುವೆ ಹಿರಿಯ ನಟ ಜಗ್ಗೇಶ್ ಕವನ ರಚಿಸುವ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ.
ಏನಿದೆ ಜಗ್ಗೇಶ್ ಟ್ವಿಟ್ನಲ್ಲಿ..!
ಭಾರತದ ರಕ್ಷಕ ಇವ
ನುಡಿದಂತೆ ನಡೆದವ.
ಆಧುನಿಕ ಭಾರತದ ಕಲಿ
ನೊಂದ ಭಾರತೀಯ ನಲಿ.
ಹೊರ ಶತೃಗಳ ಪಕ್ಷ
ಒಳ ಶತೃಗಳು ಪಕ್ಷ
ಆಚರಿಸುವರು (ಪಿತೃ) ಪಕ್ಷ
ಸಾಮ ಬೇಧ ದಂಡ
ನಡೆಯ ರಣಭಂಡ
ಮೋದಿ ಭಾರತದ ಪ್ರಚಂಡ
ಸಮಾಧಾನವಾಗಲಿ ಪ್ರಾಣ
ತೆತ್ತ ಆತ್ಮಗಳಿಗೆ
ನಿದಿರೆ ತಪ್ಪಿದ ರಾತ್ರಿಗಳು ನಿರಂತರ ಶತೃಗಳಿಗೆ.
ಪಾಪಿಸ್ತಾನದ ಶತೃಸಂಹಾರ ನಡೆಸಿ ಭಾರತೀಯರ ಸಾವಿಗೆ ನ್ಯಾಯ ನೀಡಿದ
ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದು ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.