Thursday, May 8, 2025

ದೇಶ ಕಾಯುವ ಯೋಧರ ರಕ್ಚಣೆಗಾಗಿ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್​ ಸಿಂಧೂರ್​’ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು. ಈ ದಾಳಿಗೆ ದೇಶಾದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಮುಜರಾಯಿ ಇಲಾಖೆ ತನ್ನ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಯೋದರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿಯವರು ಈ ಆದೇಶ ಹೊರಡಿಸಿದ್ದು. ಆಪರೇಷನ್​ ಸಿಂಧೂರ ಕಾರ್ಯಚರಣೆ ಯಶಸ್ವಿಯಾದ ಕಾರಣ ಮುಜರಾಯಿ ಇಲಾಖೆ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶಿಸಲಾಗಿದೆ. ಗಡಿಯಲ್ಲಿ ನಿಂತು ಹೋರಾಡುವ ಯೋಧರಿಗೆ ದೇವರು ಅನುಗ್ರಹ ಕರುಣಿಸಲಿ ಮತ್ತು ಅವರ ಆತ್ಮಸ್ಥರ್ಯ ಹೆಚ್ಚಾಗಲಿ ಎಂದು ಈ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:‘ಆಪರೇಷನ್​ ಅಭ್ಯಾಸ್​’: ಬೆಂಗಳೂರಿನಲ್ಲಿ ಒಂದೇ ಬಾರಿಗೆ 35 ಕಡೆ ಮೊಳಗಿದ ಸೈರನ್​

ಆಪರೇಷನ್​ ಸಿಂಧೂರ ಎಂದರೇನು..?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಭಾರತದ ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ್’ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ :ಗೆದ್ದಿದ್ದೀವಿ ಅನ್ನೋ ಖುಷಿ ಬೇಡ, ಅಕ್ಕ-ಪಕ್ಕದಲ್ಲಿರುವವರ ಬಗ್ಗೆ ಎಚ್ಚರಿಕೆ ಇರಲಿ: ಕುಮಾರ್​ ಬಂಗಾರಪ್ಪ

ಪಾಕಿಸ್ತಾನದ ಉಗ್ರರು ಭಾರತದ ಹಿಂದೂ ಮಹಿಳೆಯ ಕುಂಕುಮ ಅಳಿಸಿ ಕಣ್ಣೀರಿಡುವಂತೆ ಮಾಡಿದ್ದರು ಅದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಉಗ್ರ ನೆಲೆ ಮೇಲೆ ದಾಳಿ ನಡೆಸಿದ್ದು, ಅದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.

RELATED ARTICLES

Related Articles

TRENDING ARTICLES