Thursday, May 8, 2025

ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರ ಮೇಲೆ ‘ಆಪರೇಷನ್​ ಸಿಂಧೂರ’ ಕಾರ್ಯಚರಣೆ

ದೆಹಲಿ: 26 ಸಹೋದರಿಯರ ಕುಂಕುಮ ಅಳಿಸಿದ್ದಕ್ಕೆ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ “ಆಪರೇಷನ್ ಸಿಂಧೂರ” ಎಂಬ ಹೆಸರನ್ನು ಇರಿಸಿ ಯಶಸ್ವಿಯಾಗಿ ಏರ್‌ಸ್ಟ್ರೈಕ್‌  ಮಾಡಿದೆ.

ಕಳೆದ ಏಪ್ರೀಲ್​ 22ರಂದು ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ ಮೂವರು ಸೇರಿದಂತೆ 26 ಜನ ಪ್ರವಾಸಿಗರು ಸಾವನ್ನಪ್ಪಿದ್ದರು. ಇವರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ರಾಷ್ಟ್ರದಾದ್ಯಂತ ಕೂಗು ಕೇಳಿ ಬರುತ್ತಿತ್ತು. ಇದೀಗ ಭಾರತ ಸೇನೆ ಪಾಕಿಸ್ತಾನದ ಭಯೋತ್ಫಾದನ ನೆಲೆಗಳ ಮೇಲೆ ದಾಳಿ ನಡೆಸಿದ್ದು. 100ಕ್ಕೂ ಹೆಚ್ಚು ಉಗ್ರರನ್ನು ಸದೆಬಡೆದಿದೆ. ಇದನ್ನೂ ಓದಿ :ಪ್ರೀತಿಸಿ ಮನೆಬಿಟ್ಟು ಬಂದಿದ್ದ ಯುವತಿಯನ್ನ ಧಾರುಣವಾಗಿ ಕೊ*ಲೆ ಮಾಡಿದ ಗಂಡ

ಪಹಲ್ಗಾಮ್​ ದಾಳಿಯಲ್ಲಿ ಕರ್ನಾಟಕ ಸುಜಾತ್​ ಅವರು ತಮ್ಮ ಪತಿ ಭರತ್​ ಭೂಷಣ್​ರನ್ನು ಕಳೆದುಕೊಂಡಿದ್ದರು, ಶಿವಮೊಗ್ಗದ ಪಲ್ಲವಿ ತಮ್ಮ ಪತಿ ಮಂಜುನಾಥ್​ರನ್ನು ಕಳೆದುಕೊಂಡಿದ್ದರು. ಗುರುಗ್ರಾಮದ ಹಿಮಾಂಶಿ ನರ್ವಾಲ್ ತಮ್ಮ ಪತಿ ಲೆಫ್ಟಿನೆಂಟ್ ವಿನಯ್​ರನ್ನು ಕಳೆದುಕೊಂಡಿದ್ದರು. ಈ ರೀತಿಯಾಗಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಅನೇಕ ಮಕ್ಕಳು ತಮ್ಮ ತಂದೆಯನ್ನ ಕಳೆದುಕೊಂಡು ಅನಾಥರಾಗಿದ್ದರು. ಇದೀಗ ಇವರೆಲ್ಲರ ದುಖಃಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಮೊದಲ ಪ್ರತಿಕ್ರಿಯೆ ನೀಡಿದೆ.

ಆಪರೇಷನ್​ ಸಿಂಧೂರದ ಹೆಸರಿನಲ್ಲಿ ಈ ಕಾರ್ಯಚರಣೆ ನಡೆದಿದ್ದು. ಒಟ್ಟು 9 ಉಗ್ರರ ತಾಣಗಳ ಮೇಲೆ ಭಾರತದ ಮೂರು ಸೇನೆಗಳು ಜೊತೆಯಾಗಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಮಾರು 80ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸೌತ್ ಸಿನಿರಂಗದಲ್ಲಿ ಸಂಹಿತಾ ವಿನ್ಯಾ ಮಿಂಚಿಂಗ್​..!

ಮೃತ ಉಗ್ರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮತ್ತು ವಿಡಿಯೋ ಹೊರ ಬಂದಿದೆ. ಭಾರತದ ದಾಳಿಯನ್ನು ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ದೃಢಪಡಿಸಿದ್ದು, ಸಾವಿನ ಸಂಖ್ಯೆ ಎರಡಂಕ ದಾಟಿಲ್ಲ ಎಂದು ಸುಳ್ಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES