Thursday, May 8, 2025

‘ಆಪರೇಷನ್ ಸಿಂಧೂರ’ ಕೇವಲ ಧ್ಯೇಯವಲ್ಲ, ಇದೊಂದು ಪವಿತ್ರ ಪ್ರತಿಜ್ಞೆ: ನಟ ಸುದೀಪ್​

ದೆಹಲಿ : ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ಭಾರತೀಯ ಸೇನೆ ಏರ್‌ಸ್ಟ್ರೈಕ್ ಮಾಡಿದೆ. ಈ ಹಿನ್ನೆಲೆ ಕಿಚ್ಚ ಸುದೀಪ್ ಭಾರತೀಯ ಸೇನೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆಪರೇಷನ್​ ಸಿಂಧೂರ್​ ಇಂದು ಧ್ಯೇಯವಲ್ಲ, ಇದೊಂದು ಪ್ರತಿಜ್ಞೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನಟ ಸುದೀಪ್ ಬರೆದುಕೊಂಡಿದ್ದು. ‘ ಒಬ್ಬ ಭಾರತೀಯನಾಗಿ, ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ನೋವಿನ ನಡುಕವನ್ನು ನಾನು ಅನುಭವಿಸಿದ್ದೇನೆ. ಆದರೆ ಇದಕ್ಕೆ ಇಂದು ನ್ಯಾಯ ದೊರಕಿದೆ. ಇದನ್ನೂ ಓದಿ:‘ಮೋದಿ ಭಾರತದ ಪ್ರಚಂಡ’: ‘ಆಪರೇಷನ್​ ಸಿಂಧೂರ್’​ ಬಗ್ಗೆ ಕವನ ಬರೆದ ಜಗ್ಗೇಶ್​

ಭಾರತೀಯ ಸೇನೆ ಕೈಗೊಂಡಿರುವ ‘ಆಪರೇಷನ್ ಸಿಂಧೂರ್​’ ಕೇವಲ ಒಂದು ಧ್ಯೇಯವಲ್ಲ, ಇದು ಪವಿತ್ರ ಪ್ರತಿಜ್ಞೆ, ಉಗ್ರರು ದಾಳಿ ಮಾಡುವ ಮೂಲಕ ಭಾರತದ ಸಿಂಧೂರಕ್ಕೆ ಅಪಮಾನ ಮಾಡಲಾಗಿತ್ತು. ಆದರೆ ನಮ್ಮ ಧೈರ್ಯಶಾಲಿ ಸೈನಿಕರು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ವಂದನೆಗಳು ಎಂದಿದ್ದಾರೆ.

ಇದನ್ನೂ ಓದಿ:“ಅಭಿ ಪಿಕ್ಚರ್​ ಬಾಕಿ ಹೈ”: ನಿಗೂಡ ಟ್ವಿಟ್​ ಮಾಡಿದ ಮಾಜಿ ಸೇನಾ ಮುಖ್ಯಸ್ಥ ಮನೋಜ್​ ನರವಾಣೆ

ನಮ್ಮ ಗೌರವಾನ್ವಿತ ಪ್ರಧಾನಿಗಳು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕಾರ್ಯಕ್ಕಾಗಿ ವಂದನೆಗಳು. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ. ಜೈ ಹಿಂದ್ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES