ದೆಹಲಿ: ಪಹಲ್ಗಾಮ್‌ನಲ್ಲಿ ಭೀಕರ ಉಗ್ರದಾಳಿ ನಡೆಸಿದ್ದ ಭಯೋತ್ಪಾದಕರು, ಹಿಂದೂ ಪುರುಷರನ್ನು ಹುಡುಕಿ-ಹುಡುಕಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, ಉಗ್ರರನ್ನು ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ`TELL MODI – I TOLD MODI’ ಎಂಬ ಕಾರ್ಟೂನ್ ವೈರಲ್ ಆಗುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರನ್ನು ಪಾಕಿಗಳು ಹತ್ಯೆ ಮಾಡಿದ್ದರು. ಈ ವೇಳೆ ಅವರ ಪತ್ನಿ ಪಲ್ಲವಿ ತಮ್ಮನ್ನು ಕೊಲ್ಲುವಂತೆ ಕೇಳಿದ್ದಕ್ಕೆ ಉಗ್ರರು ‘ಹೋಗಿ ಮೋದಿಗೆ ಹೇಳು’ ಎಂದಿದ್ದರು. ಈ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸರ್ಕಾರ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ್ದು. ಸಾಮಾಜಿಕ ಜಾಲತಾಣದಲ್ಲಿ ʻಮೋದಿಗೆ ಹೇಳುʼ ಎಂದಿರುವುದು ಮತ್ತು ನಾನು ʻಮೋದಿಗೆ ಹೇಳಿದ್ದೆʼ ಎನ್ನುವ ಕಾರ್ಟೂನ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:‘ಮೋದಿ ಭಾರತದ ಪ್ರಚಂಡ’: ‘ಆಪರೇಷನ್ ಸಿಂಧೂರ್’ ಬಗ್ಗೆ ಕವನ ಬರೆದ ಜಗ್ಗೇಶ್
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ್ದ ಮಂಜುನಾಥ್ ಅವರ ಪತ್ನಿ ಪಲ್ಲವಿ ‘ ನಾನು, ನನ್ನ ಪತ್ನಿ, ಮಗ ಕಾಶ್ಮೀರಕ್ಕೆ ಹೋಗಿದ್ದೆವು. ನಾವು ಪಹಲ್ಗಾಮ್‌ನಲ್ಲಿದ್ದಾಗ ಮಧ್ಯಾಹ್ನದ ವೇಳೆಗೆ ದಾಳಿ ನಡೆಯಿತು. ನನ್ನ ಪತಿಯನ್ನ ಕಣ್ಣಮುಂದೆಯೇ ಕೊಂದುಬಿಟ್ಟರು. ನಾನು ಅವರಿಗೆ ಹೆದರದೆ. ನನ್ನ ಪತಿಯನ್ನ ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಆಗ ಅವರಲ್ಲಿದ್ದ ಒಬ್ಬ ʻನಾನು ನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನು ಹೇಳು ಎಂದಿದ್ದʼ ಎಂಬುದಾಗಿ ವಿವರಿಸಿದ್ದರು.