Thursday, May 8, 2025

ಆಪರೇಷನ್​ ಸಿಂಧೂರ​ ಬೆನ್ನಲ್ಲೇ, ಆಪರೇಷನ್​ ಸಂಕಲ್ಪ: 15 ನಕ್ಸಲರ ಎನ್​ಕೌಂಟರ್​

ಬಿಜಾಪುರ: ತೆಲಂಗಾಣದ ಗಡಿಯಲ್ಲಿರುವ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 15 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ, ಅಲ್ಲಿ ಬೃಹತ್ ಬಂಡಾಯ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತರ್​ರಾಜ್ಯ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟದ ಅರಣ್ಯದಲ್ಲಿ ಇಂದು ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿಯವರೆಗೆ 15 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಆಪರೇಷನ್​ ಸಿಂಧೂರ ಬೆನ್ನಲ್ಲೇ ಪಾಕಿಗಳಿಂದ ಗುಂಡಿನ ದಾಳಿ: 7 ನಾಗರಿಕರು ಸಾವು, 38 ಜನರಿಗೆ ಗಾಯ

ಛತ್ತೀಸ್​ಗಡ್​ದ ಬಸ್ತಾರ್​ ಪ್ರದೇಶದಲ್ಲಿ ನಕ್ಸಲರ ವಿರುದ್ದ ‘ಆಪರೇಷನ್​ ಸಂಕಲ್ಪ’ ಹೆಸರಿನಲ್ಲಿ ನಕ್ಸಲ್​ ನಿಗ್ರಹ ಕಾರ್ಯಚರಣೆ ನಡೆಯುತ್ತಿದ್ದು. ಜಿಲ್ಲಾ ಮೀಸಲು ಪಡೆ (DRG), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (STF), ರಾಜ್ಯ ಪೊಲೀಸರ ಎಲ್ಲಾ ಘಟಕಗಳು, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಅದರ ಗಣ್ಯ ಘಟಕ CoBRA ಸೇರಿದಂತೆ ವಿವಿಧ ಘಟಕಗಳಿಗೆ ಸೇರಿದ ಸುಮಾರು 24,000 ಭದ್ರತಾ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:ಹಣೆಗೆ ಸಿಂಧೂರವಿಟ್ಟುಕೊಂಡು ‘ಆಪರೇಷನ್​ ಸಿಂಧೂರ’ದ ಬಗ್ಗೆ ಸಿಎಂ ಸುದ್ದಿಗೋಷ್ಟಿ; ಕೇಂದ್ರಕ್ಕೆ ಬೆಂಬಲ

ಏಪ್ರೀಲ್​ 21ರಿಂದ ನಕ್ಸಲರ ವಿರುದ್ದ ಕಾರ್ಯಚರಣೆ ನಡೆಯುತ್ತಿದ್ದು. ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಚರಣೆ ಕೈಗೊಂಡ ಭದ್ರತಾ ಪಡೆಗಳು 15 ನಕ್ಸಲರನ್ನು ಹೊಡೆದುರುಳಿಸಿದ್ದಾರೆ.

RELATED ARTICLES

Related Articles

TRENDING ARTICLES