Thursday, May 8, 2025

ಗೆದ್ದಿದ್ದೀವಿ ಅನ್ನೋ ಖುಷಿ ಬೇಡ, ಅಕ್ಕ-ಪಕ್ಕದಲ್ಲಿರುವವರ ಬಗ್ಗೆ ಎಚ್ಚರಿಕೆ ಇರಲಿ: ಕುಮಾರ್​ ಬಂಗಾರಪ್ಪ

ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಪ್ರದೇಶದಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಇದರ ಬಗ್ಗೆ ಬಿಜೆಪಿ ಶಾಸಕ ಕುಮಾರ್​ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು. ‘ಪಾಕ್​ ವಿರುದ್ದ ಗೆದ್ದಿದ್ದೀವಿ ಅನ್ನೋ ಖುಷಿ ಬೇಡ, ನಿಮ್ಮ ಅಕ್ಕ-ಪಕ್ಕದಲ್ಲಿರುವ ಅನುಮಾನಸ್ಪದ ವ್ಯಕ್ತಿಗಳ ಮೇಲೆ ಎಚ್ಚರಿಕೆ ಇರಲಿ’ ಎಂದು ಹೇಳಿದರು.

ಆಪರೇಷನ್​ ಸಿಂಧೂರ ಹೆಸರಿನಲ್ಲಿ ಭಾರತ ಭಯೋತ್ಪಾದಕರ ವಿರುದ್ದ ಕಾರ್ಯಚರಣೆ ಕೈಗೊಂಡಿದ್ದು. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಕುರಿತು ಮಾಜಿ ಶಾಸಕ ಕುಮಾರ್​ ಬಂಗಾರಪ್ಪ ಹೇಳಿಕೆ ನೀಡಿದ್ದು ‘ ಪಾಕ್ ಉಗ್ರರ‌ ಮೇಲೆ ದಾಳಿ ನಡೆಸಿರೋದು ಖುಷಿ ವಿಚಾರ, ಆದರೆ ಗೆದ್ದಿದ್ದೀವಿ ಅಂತಾ ಖುಷಿ ಪಡೋದು ಬೇಡ, ಎಲ್ಲರೂ ಸದಾ ಅಲರ್ಟ್ ಆಗಿರಿ.

ಇದನ್ನೂ ಓದಿ :‘ಆಪರೇಷನ್ ಸಿಂಧೂರ್’ ಕೇವಲ ಧ್ಯೇಯವಲ್ಲ, ಇದೊಂದು ಪವಿತ್ರ ಪ್ರತಿಜ್ಞೆ: ನಟ ಸುದೀಪ್​

ಪಾಕಿಸ್ತಾನದ  ಉಗ್ರರು ಸರಿಯಲ್ಲ, ಅವರುಯಾವ ಕ್ಷಣದಲ್ಲಾದರು ಪ್ರತೀಕಾರಕ್ಕಾಗಿ ದಾಳಿ ಮಾಡಬಹುದು. ಆದ್ದರಿಂದ ಎಲ್ಲರೂ ಜಾಗರೂಕರಾಗಿದೆ. ಅಕ್ಕ-ಪಕ್ಕದ ಮನೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇದ್ದರೆ ಅಥವಾ ಚಟುವಟಿಕೆ ನಡೆಯುತ್ತಿದ್ದರೆ. ಆ ಕುರಿತು ದೂರು ನೀಡಿ. ಅಲ್ಲದೇ ಭಾರತದ ಒಳಗೆ ಲಕ್ಷಾಂತರ ಪಾಕ್, ಬಾಂಗ್ಲಾ ವಲಸಿಗರು ಇದ್ದಾರೆ. ಅವರೆಲ್ಲರ ವೀಸಾ, ಪಾಸ್​ಪೋರ್ಟ್​ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES