Thursday, May 8, 2025

ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್​ ಸಿಂಹ

ಮೈಸೂರು : ಪಾಕಿಸ್ತಾನದ ಉಗ್ರರ ನೆಲೆ ಮೇಲೆ ಭಾರತ ದಾಳಿ ನಡೆಸಿದ ಹಿನ್ನಲೆ ಮೈಸೂರಿನಲ್ಲಿ ಸಂಭ್ರಮಾಚರಣೆ ಮಾಡಿದ್ದು. ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಪೂಜೆಯಲ್ಲಿ
ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಪ್ರತಾಪ್​ ಸಿಂಹ ಕಾಂಗ್ರೆಸ್​ ಮತ್ತು ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ‘ಮೋದಿ ಅವರು ಬಾಯಿ ಮಾತಿಗೆ ಈ ಜಯ ಘೋಷ ಹಾಕಲಿಲ್ಲ. ಇವತ್ತು ಆಪರೇಷನ್ ಸಿಂಧೂರ ಮಾಡಿ ಅದನ್ನು ನಿಜ ಮಾಡಿದ್ದಾರೆ. ನ್ಯೂಕ್ಲಿಯರ್ ಟೆಸ್ಟ್ ಮಾಡಿದ ವಾಜಪೇಯಿ ನಮ್ಮ ಹೆಮ್ಮೆ. ಈಗ ಮೋದಿ ಅವರು ಕೂಡ ನಮ್ಮ ಹೆಮ್ಮೆ. ಸಿದ್ದರಾಮಯ್ಯ ಮೊದಲು ಯುದ್ದ ಬೇಡ ಅಂದು ಪಾಕಿಸ್ತಾನಿಗಳಿಗೆ ಹೀರೋ ಆಗಿದ್ದರು. ನಂತರ ಜನ ಥೂ ಛೀ ಅಂತಾ ಉಗಿದ ಮೇಲೆ ಸಿದ್ದರಾಮಯ್ಯ ಬದಲಾದರು. ಇದನ್ನೂ ಓದಿ: ದೇಶ ಕಾಯುವ ಯೋಧರ ರಕ್ಚಣೆಗಾಗಿ ಮುಜರಾಯಿ ಇಲಾಖೆ ದೇವಾಸ್ಥಾನಗಳಲ್ಲಿ ವಿಶೇಷ ಪೂಜೆ

ಇಂದು(ಮೇ.07) ಬೆಳ್ಳಿಗ್ಗೆ ಕಾಂಗ್ರೆಸ್ ಶಾಂತಿಯ ಮಂತ್ರದ ಟ್ವೀಟ್ ಮಾಡಿತ್ತು. ಜನ ತಿರುಗಿ ಬಿದ್ದ ಮೇಲೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಜನಕ್ಕೆ ಹೆದರಿ ಸಿದ್ದರಾಮಯ್ಯ ಇಂದು ಹಣೆಗೆ ಸಿಂಧೂರ ಇಟ್ಟು ಕೊಂಡಿದ್ದಾರೆ. ಸಿದ್ದರಾಮಯ್ಯ ಇಂದು ಸಿಂಧೂರರಾಮಯ್ಯ ಆಗಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ ಎಂದು ಹೇಳಿದರು.

ಇದನ್ನೂ ಓದಿ:‘ಆಪರೇಷನ್​ ಅಭ್ಯಾಸ್​’: ಬೆಂಗಳೂರಿನಲ್ಲಿ ಒಂದೇ ಬಾರಿಗೆ 35 ಕಡೆ ಮೊಳಗಿದ ಸೈರನ್​

ಮುಂದುವರಿದು ಮಾತನಾಡಿದ ಪ್ರತಾಪ್​ ಸಿಂಹ ‘ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಬಂತಾ? ಗಾಂಧೀಜಿಯ ಶಾಂತಿ ಮಾತ್ರದಿಂದ ಮಾತ್ರ ಸ್ವಾತಂತ್ರ್ಯ ಬರಲಿಲ್ಲ. ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್ ರಂಥ ಕ್ರಾಂತಿಕಾರಿಗಳ ಕೊಡುಗೆ ಮುಖ್ಯ ಆಗಿತ್ತು. ಯುದ್ದ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡ್ತಿವಿ. ಶಾಂತಿ ಸ್ಥಾಪನೆಗಾಗಿಯೆ ಯುದ್ದ ಮಾಡ್ತಾ ಇರೋದು. ಪಾಕಿಸ್ತಾನ ಸೃಷ್ಟಿ ಆಗಲು ಕಾರಣ ಕಾಂಗ್ರೆಸ್. ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್, ಹೀಗಾಗಿ ಪಾಕಿಸ್ತಾನದ ಮೇಲೆ ಯುದ್ದ ಅಂದರೆ ಕಾಂಗ್ರೆಸ್ ಗೆ ಹಿಂಸೆ ಅನ್ನಿಸುತ್ತೆ.
ಕಾಂಗ್ರೆಸ್ ಮನಸ್ಥಿತಿ ಅರ್ಥ ಮಾಡಿಕೊಳ್ಳ ಬೇಕು ಎಂದು ಪ್ರತಾಪ್​ ಸಿಂಹ ಹೇಳಿದರು.

RELATED ARTICLES

Related Articles

TRENDING ARTICLES