ಸದ್ಯ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಹಾಗೂ ರೂಪದರ್ಶಿ ಸಂಹಿತಾ ವಿನ್ಯಾ ಸೂಪರ್ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೆ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತ ಬಂದಿರುವ ಸಂಹಿತಾ ಅಭಿನಯದ, ರಿಲೀಸ್ ಹಂತದಲ್ಲಿರುವ ಮಿಕ್ಸಿಂಗ್ ಪ್ರೀತಿ ಚಿತ್ರವೀಗ ತನ್ನ ಹಾಡಿನಿಂದಲೇ ದೊಡ್ಡದಾಗಿ ಸದ್ದು ಮಾಡುತ್ತಿದೆ.
ನಾಯಕಿ ಸಂಹಿತಾ, ಸಿಂಟೋ ಅಭಿನಯದ ‘ಬಾರೆ ನನ್ನ ಹೀರೋಯಿನ್, ನಾನೇ ನಿನ್ನ ಶಾರುಖ್ ಖಾನ್’ ಎಂಬ ಮಾಸ್ ಹಾಡುಗಳು ಸಖತ್ ವೈರಲ್ ಆಗಿದೆ. ಇದರಲ್ಲಿ ಸಂಹಿತಾ ಅವರ ಅದ್ಭುತ ಪರ್ಫಾರ್ಮೆನ್ಸ್ಗೆ ಪಡ್ಡೆ ಹುಡುಗರು ಮನಸೋತಿದ್ದಾರೆ. ಇದಲ್ಲದೆ ತೆರೆಗೆ ಬರಲು ಸಿದ್ದವಾಗಿರುವ ಬಹು ನಿರೀಕ್ಷಿತ ‘ಮೆಜೆಸ್ಟಿಕ್ -2’ಚಿತ್ರದಲ್ಲೂ ಸಂಹಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಗಂಡನನ್ನು ಪಟಾಯಿಸಿಕೊಂಡಿದ್ದ ಪ್ರೇಯಸಿಗೆ, ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಪತ್ನಿ
‘ಹಾಲು ತುಪ್ಪ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ. ‘ಸೀತಮ್ಮ ಬಂದ್ಲು ಸಿರಿಮಲ್ಲಿಗೆ ತೊಟ್ಟು ಎಂಬ ಚಿತ್ರದಲ್ಲಿ ತಮ್ಮ ಅತ್ಯುತ್ತಮ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ಗಳಿಸಿದ್ದರು. ಅಲ್ಲದೆ ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೆ ತೆಲುಗು, ತಮಿಳು ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸಂಹಿತಾ ವಿನ್ಯಾಗೆ ಪಕ್ಕದ ಟಾಲಿವುಡ್, ಬಾಲಿವುಡ್ ನಿಂದಲೂ ತುಂಬಾ ಕರೆಗಳು ಬರುತ್ತವೆ.
ಇದನ್ನೂ ಓದಿ:ಸೋಮಾರಿಯೇ ‘ರಾಜರತ್ನಾಕರ’ ಆಗುವ ಕಥೆ: ಎಲ್ಲರ ಮನೆ, ಮನಗಳನ್ನು ಮುಟ್ಟುವ ಸ್ಟೋರಿ ಇದು..!
ಜೊತೆಗೆ 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿರುವ ಸಂಹಿತಾ ವಿನ್ಯಾಗೆ ಫ್ಯಾಷನ್ ಡಿಸೈನರ್ ಆಗಿ ನವೀನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ, ಮಾಡೆಲಿಂಗ್ ಎರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿರುವ ಅಚ್ಚಕನ್ನಡದ ಪ್ರತಿಭೆ ಸಂಹಿತಾ ಆದಷ್ಟು ಬೇಗನೇ ಸೌತ್ ಫಿಲಂ ಇಂಡಸ್ಟ್ರಿಯ ಸ್ಟಾರ್ ನಟಿಯರಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳಿವೆ..