ದಾವಣಗೆರೆ : ಹಳೆ ವೈಶಮ್ಯಕ್ಕೆ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು. ಕೊಲೆಯಾದ ರೌಡಿಶೀಟರ್ನನ್ನು 48 ವರ್ಷದ ಸಂತೋಷ್ ಅಲಿಯಾಸ್ ಕಣುಮಾ ಎಂದು ಗುರುತಿಸಲಾಗಿದೆ.
ನಿನ್ನೆ (ಮೇ.05) ಸಂಜೆ ಐದು ಗಂಟೆಗೆ ದಾವಣಗೆರೆ ನಗರದ ಹದಡಿ ರಸ್ತೆಯ ಕ್ಲಬ್ ಒಂದರಲ್ಲಿ ಘಟನೆ ನಡೆದಿದ್ದು. ಕ್ಲಬ್ನಲ್ಲಿದ್ದ ಸಂತೋಷ್ನನ್ನು ರೌಡಿಗಳ ಗುಂಪೊಂದು ಭೀಕರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದೆ. ಸುಮಾರು 5 ಜನರ ಗುಂಪೊಂದು ಮಾರಕಾಸ್ತ್ರದೊಂದಿಗೆ ಕ್ಲಬ್ ಒಳಗೆ ಎಂಟ್ರಿ ಕೊಟ್ಟಿದ್ದು ಸಂತೋಷ್ನನ್ನು ನೋಡುತ್ತಿದ್ದಂತೆ ಆತನ ಮೇಲೆ ಎರಗಿದೆ.
ಇದನ್ನೂ ಓದಿ :ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದ ವಧು ಹೃದಯಘಾತದಿಂದ ಸಾ*ವು
ಆಟ್ಯಾಕ್ ಮಾಡಿರುವ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಕೇವಲ 37 ಸೆಕೆಂಡ್ಗಳಲ್ಲಿ ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯ ಮತ್ತು ಫಿಲ್ಡ್ನಲ್ಲಿ ಹೆಸರು ಮಾಡಲು ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.