ಶಿವಮೊಗ್ಗ : ಈ ಕ್ರಿಕೆಟ್ ವಿಚಾರವಾಗಿ ಗಲಾಟೆಯಾಗಿ ಕೊಲೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಆಟದ ನಡುವೆ ಜಗಳ ಉಂಟಾಗಿ ಚಾಕು ಇರಿದು ಓರ್ವ ಯುವಕನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ದುರ್ದೈವಿಯನ್ನು 23 ವರ್ಷದ ಅರುಣ್ ಎಂದು ಗುರುತಿಸಿದ್ದು. ಮತ್ತೊಬ್ಬ ಯುವಕನಿಗೆ ತೀವ್ರ ಗಾಯವಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲೆನಾಡು ಜಿಲ್ಲೆ, ಶಿವಮೊಗ್ಗದ ಭದ್ರಾವತಿಯಲ್ಲಿ ಆಗ್ಗಾಗ್ಗೆ ರೌಡಿಗಳ ಅಟ್ಟಹಾಸ ಕಂಡು ಬರುತ್ತಲೇ ಇದ್ದು, ಇದೀಗ ಸ್ನೇಹಿತರ ನಡುವೆಯೇ ಜಗಳವಾಗಿ ಮರ್ಡರ್ ನಡೆದು ಹೋಗಿದೆ. ಅಂದಹಾಗೆ, ಈ ಜಗಳದಲ್ಲಿ ಅರುಣ್ (23) ಎಂಬ ಯುವಕನ ಹತ್ಯೆ ಮಾಡದ್ದರೆ. ಸಂಜಯ್ ಎಂಭಾತನಿಗೆ ತೀವ್ರ ಗಾಯವಾಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಮೋದಿಗೆ ಗೊತ್ತಿತ್ತು, ಆದರೂ ಅವರು ಪ್ರವಾಸಿಗರ ಪ್ರಾಣ ಉಳಿಸಲಿಲ್ಲ: ಖರ್ಗೆ
ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನವೊಂದರಲ್ಲಿ ನಿನ್ನೆ ಕ್ರಿಕೆಟ್ ಅಟವಾಡುತ್ತಿದ್ದ ವೇಳೆ ನಡೆದ ಜಗಳ ತಾರಕಕ್ಕೇರಿ ಈ ಕೊಲೆ ನಡೆದು ಹೋಗಿದೆ. ಸಂಜೆ ಕ್ರಿಕೆಟ್ ಮುಗಿಸಿ ಮನೆಗೆ ತೆರಳಿದ್ದ ಅರುಣ್ಗೆ ಮತ್ತೆ ರಾತ್ರಿ ಕರೆಸಿ, ಅರುಣ್ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಅರುಣ್ನನ್ನು ಉಳಿಸಲು ಬಂದ ಸಂಜಯ್ ಕೈ ಹಾಗೂ ಬೆನ್ನಗೆ ಚಾಕು ಇರಿದಿದ್ದು, ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ :‘ಸೂಸೈಡ್ ಬಾಂಬರ್ ಆಗಿ ದೇಶಕ್ಕೆ ಬಲಿದಾನ ನೀಡಲು ನಾನು ಸಿದ್ದ’: ಮತ್ತೆ ಪುನರುಚ್ಚರಿಸಿದ ಜಮೀರ್
ಇನ್ನು ಮೃತ ಅರುಣ್ಗೆ ಚಾಕು ಇರಿದಿದ್ದ ಆರೋಪಿಗಳನ್ನು ಅರುಣ್, ಸಚಿನ್, ಸಂಜು, ಪ್ರಜ್ವಲ್ ಎಂದು ಗುರುತಿಸಿದ್ದು. ಕೃತ್ಯದ ಬಳಿಕ ಎಲ್ಲರೂ ಸ್ಥಳಿದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದು. ಮೃತ ಅರುಣ್ ಸಚಿನ್ ಎಂಭಾತನ ಕಪಾಳಕ್ಕೆ ಹೊಡೆದ ಕಾರಣಕ್ಕೆ ಗಲಾಟೆ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದೆ.