ಬಾಗಲಕೋಟೆ : ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನಿನ್ನೆ (ಮೇ.04) ಬಾಗಲಕೋಟೆಯಲ್ಲಿ ಭವಿಷ್ಯ ನುಡಿದಿದ್ದು. ‘ಈ ವರ್ಷ ಮತಾಂಧತೆ ಹೆಚ್ಚಾಗುತ್ತೆ, ಜಗತ್ತಿನ ದೊಡ್ಡ, ದೊಡ್ಡ ನಾಯಕರಿಗೆ ಅಪಾಯವಿದ್ದು. ಎರಡ್ಮೂರು ಮಹಾನಾಯಕರಿಗೆ ಅಪಮೃತ್ಯು ಬರಲಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು. ‘ಪಹಲ್ಗಾಮ್ ದಾಳಿಯ ವಿಚಾರವಾಗಿ ನಾನು ಮುಂಚಿತವಾಗಿಯೇ ಹೇಳಿದ್ದೆ, ಉತ್ತರ ನಾಡಿನಲ್ಲಿ ಹಗೆಯ ಬೇಗೆ ಹಬ್ಬಿತ್ತು.ಸುತ್ತುವರೆದು ಬರುವಾಗ ಜಗವೆಲ್ಲಾ ಕೂಲಾದೀತು ಎಂದು ಹೇಳಿದ್ದೆ.
ಇದನ್ನೂ ಓದಿ :ಮನೆ-ಮನೆಗೆ ಹೋಗಿ ದತ್ತಾಂಶ ಸಂಗ್ರಹ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ಸಿಎಂ ದಿಟ್ಟ ನಿರ್ಧಾರ
ನಾನು ಹೇಳಿದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಹಗೆ ಆಯ್ತು, ಮೃತ್ಯ ಆಯ್ತು. ಇದು ಭಾರತವಲ್ಲದೇ, ಇಡೀ ಜಗತ್ತಿಗೆ ಹಬ್ಬುತ್ತೆ. ಈ ವರ್ಷ ಮತಾಂಧತೆ ಹೆಚ್ಚಾಗಲಿದ್ದು. ಬಹುದೊಡ್ಡ ಅಪಾಯವಿದೆ. ಅಷ್ಟೇ ಅಲ್ಲದೇ ಒಂದು ದೊಡ್ಡ ಖಾಯಿಲೆ ಬರುತ್ತೆ. ಅದು ಐದು ವರ್ಷವಿರುತ್ತೆ. ಇಡೀ ಜಗತ್ತಿಗೆ ಶಾಂತಿ, ನೆಮ್ಮದಿ ಇಲ್ಲದಂತಾಗುತ್ತೆ ಎಂದು ಕೋಡಿಶ್ರೀ ಭವಿಷ್ಯ ನುಡಿದರು.
ಇನ್ನು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ವಿಚಾರದ ಕುರಿತು ಮಾತನಾಡಿದ ಕೋಡಿ ಶ್ರೀ
‘ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ :ರಾಷ್ಟ್ರದ್ರೋಹಿ ಸೋನು ನಿಗಮ್ನ ಬಂಧಿಸಿ ಜೈಲಿಗೆ ಅಟ್ಟಬೇಕು; ಕರವೇ ನಾರಯಣಗೌಡ
ನೈಸರ್ಗಿಕ ವಿಕೋಪದ ಕುರಿತು ಶ್ರೀಗಳ ಮಾತು..!
ನೈಸರ್ಗಿಕ ವಿಕೋಪದ ಕುರಿತು ಮಾತನಾಡಿದ ಶ್ರೀಗಳು ‘ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ‘ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಆ ಸುನಾಮೀ ಡೆಲ್ಲಿಗೂ ತಲುಪುತ್ತದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಇದೆ ಎಂದು ಹೇಳಿದರು.
ಇನ್ನು ಜಗತ್ತಿನ ದೊಡ್ಡ ನಾಯಕರಿಗೆ ಅಪಾಯವಿದೆ ಎಂದು ಹೇಳಿದ ಶ್ರೀಗಳು ‘ ಜಗತ್ತಿನ ಎರಡ್ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ದೊಡ್ಡ ರಾಜಕಾರಣಿಗಳಿಗೆ ಅಪಾಯವಿದೆ ಎಂದು ಹೇಳಿದರು.