Sunday, May 4, 2025

ಪಹಲ್ಗಾಮ್​ ಬಗ್ಗೆ ಮಾತನಾಡಲು ಹೋಗಿ ಪೊಲೀಸ್​ ಕೇಸ್​ ಹಾಕಿಸಿಕೊಂಡ ವಿಜಯ್​ ದೇವರಕೊಂಡ

ಸತತ ಸೋಲುಗಳಿಂದ ಕಂಗಾಲಾಗಿರೋ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೆಲವೊಮ್ಮೆ ತಮ್ಮ ಸಿನಿಮಾಗಳಿಗಿಂತ ಬೇರೆ ವಿಚಾರಗಳಿಗೆ ಸುದ್ದಿಯಲ್ಲಿರ್ತಾರೆ. ಎಷ್ಟು ಬೇಗ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದಲ್ಲಿ ತಮ್ಮ ಕ್ರೇಜ್ ಹೆಚ್ಚಿಸಿಕೊಂಡ್ರೂ ಅಷ್ಟೇ ವೇಗವಾಗಿ ಬೇರೆ ಬೇರೆ ಕಾರಣಗಳಿಂದ ಸೈಲಂಟಾಗಿ ಬಿಟ್ಟರು.

ಇತ್ತೀಚೆಗೆ ಹೈದರಬಾದ್​ನಲ್ಲಿ ನಡೆದ ರೆಟ್ರೋ ಚಿತ್ರದ ಪ್ರಿ ರಿಲೀಸ್ ಇವೆಂಟ್ನಲ್ಲಿ ವಿಜಯ್ ದೇವೆಕೊಂಡ ಭಾಗಿಯಾಗಿದ್ದರು. ಇಲ್ಲಿ ಮಾತನಾಡಿದ ವಿಜಯ ದೇವರಕೊಂಡ ಪಹಲ್ಗಾಮ್ ದಾಳಿಯನ್ನು ಖಂಡಿಸಿ ಆಕ್ರೋಶ ಹೊರಹಾಕಿದರು. ಭಯೋತ್ಪಾದರ ಜೊತೆಗೆ ಬುಡಕಟ್ಟು ಜನರ ಬಗ್ಗೆ ಅಸಡ್ಡೆಯಿಂದ ಮಾತನಾಡಿದ ನಟ ವಿಜಯ ದೇವಕೊಂಡ ಮೇಲೆ ಇದೀಗ ಕೇಸ್ ದಾಖಲಾಗಿದೆ. ಒಂದಿಷ್ಟು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ :KSRTC ಬಸ್-ಆಟೋ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಇಬ್ಬರು ಸಾ*ವು, ನಾಲ್ವರಿಗೆ ಗಾಯ

ಪಹಲ್ಗಾಮ್ ದಾಳಿ ವಿಚಾರದಲ್ಲಿ ಅಲ್ಲಿಯ ಜನರಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದೆ ಇರೋದೆ ಈ ಘಟನೆಗೆ ಕಾರಣವೆಂದಿರೋ ದೇವರಕೊಂಡ, ಅಲ್ಲಿಯ ಜನರ ಬ್ರೈನ್​ ವಾಶ್​ ಮಾಡೋ ಕೆಲಸ ನಡೆಯುತ್ತಿದೆ. ಅದನ್ನು ತಡೆಯಬೇಕು. ಕಾಶ್ಮೀರ ನಮ್ಮದು, ಕಾಶ್ಮೀರದ ಜನರು ನಮ್ಮವರು. ಪಾಕಿಸ್ಥಾನದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಆದಷ್ಟು ಬೇಗ ಅಲ್ಲಿಯ ಜನರೇ ತಮ್ಮ ದೇಶದ ವಿರುದ್ದ ಹೋರಾಟ ಮಾಡ್ತಾರೆ. ಯುದ್ದದ ಅವಶ್ಯಕತೆಯಿಲ್ಲ ಎಂದಿದ್ದಾರೆ. 2 ವರ್ಷದ ಹಿಂದೆ ಖುಷಿ ಚಿತ್ರದ ಶೂಟಿಂಗೆ ಕಾಶ್ಮೀರಕ್ಕೆ ಹೋದ ದಿನಗಳನ್ನು ಮರೆಯಕ್ಕಾಗಲ್ಲ ಅಂದಿದ್ದಾರೆ.

ಇದನ್ನೂ ಓದಿ :ಅತ್ಯಾಚಾರವೆಸಗಿ ಎನ್​ಕೌಂಟರ್​ಗೆ ಬಲಿಯಾಗಿದ್ದ ಕಾಮುಕನ ಶವಕ್ಕೆ ಕೊನೆಗೂ ಮುಕ್ತಿ ಕೊಟ್ಟ ಪೊಲೀಸರು

ಅಲ್ಲಿ ತನಕ ಆರಾಮವಾಗಿ ಮಾತಾಡ್ತಿದ್ದ ವಿಜಯ್ ದೇವರಕೊಂಡ ಏಕಾಏಕಿ ‘500 ವರ್ಷಗಳ ಹಿಂದೆ ಬುಡಕಟ್ಟು ಜನರು ಹೊಡೆದಾಡಿಕೊಳ್ಳುತ್ತಿದ್ರು .. ಈ ಜನಾಂಗಕ್ಕೆ ಬುದ್ದಿ, ಕಾಮನ್ ಸೆನ್ಸ್ ಇಲ್ಲ. ನಾವೆಲ್ಲ ಒಟ್ಟಾಗಿ ನಿಲ್ಲಬೇಕು’ ಎಂದಿದ್ದಾರೆ. ಈ ಹೇಳಿಕೆಯಿಂದ ಬುಡಕಟ್ಟು ಜನಾಂಗಕ್ಕೆ ಬೇಸರವಾಗಿದ್ದು, ವಕೀಲ ಕಿಶನ್ ಲಾಲ್ ಹೈದರಬಾದ್ನ ಎಸ್​ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟಾರೆ ಮಾತಿನ ಭರದಲ್ಲಿ ದೇವರಕೊಂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಕ್ಷಮೆಯಾಚಿಸ್ತಾರಾ ಕಾದು ನೋಡಬೇಕು.

RELATED ARTICLES

Related Articles

TRENDING ARTICLES